ಫಾರ್ಚೂನರ್ ಕಾರಿನ ಮೂಲ ಬೆಲೆ ಎಷ್ಟು ಗೊತ್ತಾ..?

ಯಾರಿಗಾದರೂ ದೇಶಭಕ್ತರಾಗಲು ಮನಸಿದ್ರೆ ಟೊಯೋಟಾ ಫಾರ್ಚೂನರ್ ಕಾರ್ ಖರೀದಿಸುವ ಮೂಲಕ ಆಗಬಹುದು. ಹೇಗೆ ಅಂತೀರಾ? ಒಂದು ಫಾರ್ಚೂನರ್ ಕಾರಿನ ಬೆಲೆ 40 ಲಕ್ಷ.

ಅದನ್ನು ರಚಿಸಿದ ಸಂಸ್ಥೆಗೆ ಸಿಗೋದು ಕೇವಲ 40 ಸಾವಿರ ಮಾತ್ರ. ನೆನಪಿರಲಿ ನಲ್ವತ್ತು ಲಕ್ಷದ ಕಾರಿನಲ್ಲಿ ಕೇವಲ 40 ಸಾವಿರ ಮಾತ್ರ. ಅದನ್ನು ಮಾರುವ ಶೋ ರೂಮ್ ಅವರಿಗೆ 1 ಲಕ್ಷ ರೂ. ಲಾಭ. ಒಟ್ಟು ನಲ್ವತ್ತು ಲಕ್ಷದ ಕಾರಿನಲ್ಲಿ ಒಂದು ಲಕ್ಷದ ನಲ್ವತ್ತು ಸಾವಿರ ರೂ. ಲಾಭ. ಹಾಗಾದ್ರೆ ಕಾರಿನ ಮೂಲ ಬೆಲೆ ಎಷ್ಟು ಗೊತ್ತಾ? ಕೇವಲ 16 ಲಕ್ಷ. ಇದು ನಿಜವಾಗಿಯೂ ಫಾರ್ಚೂನರ್ ಕಾರಿನ ಮೂಲ ಬೆಲೆ. ಹಾಗಾದ್ರೆ ಉಳಿದ ಹಣ ಯಾರಿಗೆ ಹೋಗುತ್ತೆ? ನಿಮ್ಮ ಊಹೆ ಸರಿಯಾಗಿದೆ ಮೋದಿ ಸರ್ಕಾರಕ್ಕೆ ಬರೋಬ್ಬರಿ 18 ಲಕ್ಷ ರೂ. ಕಾರಿನ ಮೇಲೆ ಟ್ಯಾಕ್ಸ್. 18 ಲಕ್ಷ ಕೊಟ್ಟ ಮೇಲೆ ದೇಶಭಕ್ತರಾಗಲು ಕಷ್ಟವೇ.? ವಿಶ್ವದ ಯಾವುದೇ ದೇಶದಲ್ಲಿ ಇಲ್ಲದ ಟ್ಯಾಕ್ಸ್ ಏಕೈಕ ದೇಶದಲ್ಲಿದೆ. ಈ ಸುದ್ದಿ ಇದೀಗ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಇದು ಕೇವಲ ಒಂದು ಕಾರಿನ ವಿಷಯವಲ್ಲ ಹಲವಾರು ಕಾರಿನ ಮೇಲೂ ಇದೇ ರೀತಿಯ ಟ್ಯಾಕ್ಸ್ ಭಾರವನ್ನು ಹಾಕಲಾಗಿದೆ. ನಾಲ್ಕು ಲಕ್ಷದ ಸ್ವಿಫ್ಟ್ ಕಾರಿಗೂ 4 ಲಕ್ಷ ಟ್ಯಾಕ್ಸ್ ಹಾಕಿ ದೋಚುವ ಏಕೈಕ ದೇಶವೆಂದರೆ ಅದು ಭಾರತ. 32ರೂ.ಯ ಪೆಟ್ರೋಲನ್ನೇ 115ರೂ.ಗೆ ಮಾರುವಾಗ ಇದೇನು ಮಹಾ ಅಲ್ವ??

ದೇಶದಲ್ಲಿನ ಅಂದರೆ ನಾವು ಕಟ್ಟಿರುವ ತೆರಿಗೆ ಹಣವನ್ನೆಲ್ಲಾ ಅದಾನಿ ಅಂಬಾನಿಗೆ ಸಾಲ ಕೊಟ್ಟು ವಿಶ್ವದ ನಂಬರ್ ವನ್ ಬಿಸಿನೆಸ್ ಮ್ಯಾನಾಗಿ ಮಾಡಲು ಹೊರಟಿದೆ. ಇವೆಲ್ಲಾ ನಮಗೆ ಬೇಕಾಗಿಲ್ಲ. ನಾವೆಲ್ಲಾ ಯಾವ ಮಸೀದಿ ಅಡಿಯಲ್ಲಿ ದೇವಸ್ಥಾನದ ಕುರುಹು ಇದೆ, ಯಾವ ಅಂಗಡಿಯಲ್ಲಿ ಹಲಾಲ್‌ ಕಟ್ ನಡೆಯುತ್ತಿದೆ, ಯಾವ ಮಸೀದಿಯಿಂದ ಅಝಾನ್ ಮೊಳಗ್ತಿದೆ, ಯಾರು ಯಾರನ್ನು ಲವ್ ಮಾಡ್ತಿದ್ದಾರೆ ಇತ್ಯಾದಿ ಇತ್ಯಾದಿ ವಿಚಾರಗಳ ಬಗ್ಗೆ ಬಹಳ ಗಂಭೀರವಾಗಿ ಚಿಂತನೆ ನಡೆಸ್ತಾ ಕೂತಿದ್ದೇವೆ… ಶ್ರೀಲಂಕಾ ಸಣ್ಣ ರಾಷ್ಟ್ರ ಈಗ ಮುಳುಗಿದ್ರೆ ಮತ್ತೆ ಏಳಬಹುದು. ಇದು 135ಕೋಟಿ ಜನ ಸಂಖ್ಯೆ ಹೊಂದಿರುವ ರಾಷ್ಟ್ರ. ಲಗಾಡಿಯಾದ್ರೆ ರಿಪೇರಿ ಆಗಲು ಶತಮಾನಗಳೇ ಬೇಕು… ನೆನಪಿರಲಿ ಇವೆಲ್ಲಾ ನಮ್ಮ ಜಾಣ ಮೌನಗಳಿಂದಲೇ ಆಗ್ತಿರೋದು…

Related