ನರಭಕ್ಷಕ ಚಿರತೆ ಸೆರೆ

  • In State
  • March 19, 2020
  • 323 Views
ನರಭಕ್ಷಕ ಚಿರತೆ ಸೆರೆ

ತುಮಕೂರು, ಮಾ. 19 : ನಾಲ್ವರನ್ನು ಬಲಿ ಪಡೆದ, ಜಿಲ್ಲೆಯಲ್ಲಿ ಭಾರೀ ಭೀತಿಗೆ ಕಾರಣವಾಗಿದ್ದ ನರಭಕ್ಷಕ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬಂದಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಸಹಿತ ಒಟ್ಟಾರೆ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದರು. ಮಾನವರ ಮೇಲೆ ದಾಳಿ ನಡೆಸಿದ್ದ 12ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಕಾಣಿಸಿದ್ದ ಚಿರತೆಯ ಚಹರೆ ಮತ್ತು ಇದರ ಚಹರೆ ಒಂದೇ ರೀತಿ ಇರುವುದರಿಂದ ಇದೇ ನರಹಂತಕ ಚಿರತೆ ಇರಬಹುದು ಎಂದು ನಂಬಲಾಗಿದೆ.
ಸೆರೆ ಸಿಕ್ಕಿದ್ದು ಹೇಗೆ? ; ತುಮಕೂರು ತಾಲೂಕಿನ ಹಾಲನೂರು ಸಮೀಪ ಹೇಮಾವತಿ ಚಾನಲ್ ಮೇಲೆ ಓಡಾಡುತ್ತಿದ್ದ ಚಿರತೆ ಜನರ ಕಣ್ಣಿಗೆ ಬಿತ್ತು. ಜನರನ್ನು ಕಂಡು ಗಾಬರಿಗೊಂಡ ಚಿರತೆ ಸೇತುವೆ ಕೆಳಗೆ ಅವಿತುಕೊಂಡಿತು. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅವರು ಕಾರ್ಯಾಚರಣೆ ನಡೆಸಿ ದರೂ ಚಿರತೆ ಸೆರೆ ಹಿಡಿಯಲು ಆಗಲಿಲ್ಲ. ಅನಂತರ ಅರಿವಳಿಕೆ ತಜ್ಞ ಡಾ| ಸನತ್ ಹಾಗೂ ಶಾರ್ಪ್ಶೂಟರ್ ಅಕ್ರಂ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಡಾ| ಸನತ್ ಅವರು ಸೇತುವೆ ಕೆಳಗೆ ಅಡಗಿದ್ದ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಬಳಿಕ ಸೆರೆ ಹಿಡಿಯಲಾಯಿತು. ಇನ್ನು ಕೆಲವು ಪರೀಕ್ಷೆಗಳ ಬಳಿಕ ಇದೇ ನರಹಂತಕ ಚಿರತೆಯೇ ಎಂಬುದನ್ನು ಖಾತರಿಪಡಿಸಲಾಗುತ್ತದೆ.

Related