ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಿಗೆ ಆಗ್ರಹ

ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಿಗೆ ಆಗ್ರಹ

ರಾಮದುರ್ಗ : ಕೋವಿಡ್-19 ಹಿನ್ನೆಲೆಯಲ್ಲಿ ವಿವಿಧ ಭಾಗಗಳಲ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಿಪಿಐ(ಎಂ)ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾರ್ಮಿಕರಿಗೆ ಪರಿಹಾರ ನೀಡಬೇಕೆಂದು ತಹಶೀಲ್ದಾರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು.

ಕೊರೋನಾ ದಾಳಿಯನ್ನು ತಡೆಯುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ವೈರಸ್ ಹರಡುವ ಮೊದಲೇ ಕೇಂದ್ರ ಸರಕಾರ ಈ ಕುರಿತು ವಿಚಾರ ಮಾಡಿದ್ದರೆ ಭಾರತ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರಲಿಲ್ಲ ಎಂದು ಆರೋಪಿಸಿದರು.

ಲಾಕ್‌ಡೌನ್‌ನಿಂದಾಗಿ ಕಾರ್ಮಿಕರ ಹೊಟ್ಟೆ ಪಾಡಿಗಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದುಡಿಯಲಿಕ್ಕೆ (ವಲಸೆ) ಬಂದಿರುವ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಯಾವುದೇ ಆದಾಯವಿಲ್ಲದೆ ಬೀದಿಪಾಲಾಗಿರುವದು ಕೇಂದ್ರ ಸರಕಾರದ ಸಾಧನೆಯಾಗಿದೆ ವ್ಯಂಗ್ಯ ಮಾಡಿದರು.

ಅನ್ಯ ರಾಜ್ಯದಲ್ಲಿ ನಿರಾಶ್ರಿತರಾದ ಶ್ರಮಿಕರು ತಮ್ಮ ಸ್ವಂತ ಊರುಗಳಿಗೆ ಪ್ರಯಾಣ ಮಾಡಲಾಗದೆ, ಕಾಲ ನಡಿಗೆಯಲ್ಲೆ ತಮ್ಮ ಹೆಂಡತಿ ಮಕ್ಕಳೊಂದಿಗೆ ಉರಿ ಬಿಸಲಿನಲ್ಲಿ ಹೊರಟಾಗ ಹೊಟ್ಟೆಗೆ ಅನ್ನವಿಲ್ಲದೆ, ಕುಡಿಯಲು ನೀರು ಸಹ ದೊರೆಯದೆ, ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ರಸ್ತೆಯಲ್ಲೆ ಬಿದ್ದು ಸಾವಿಗಿಡಾಗಿದ್ದಾರೆ. ಇವರ ಸಾವಿಗೆ ಯಾರು ಕಾರಣರು ?. ಕೇಂದ್ರ ಸರಕಾರ ಸೂಕ್ತ ಸಮಯದಲ್ಲಿ ಸರಿಯಾದ ಆಲೋಚನೆ ಮಾಡದೆ ಇರುವದರಿಂದ ಇಂತಹ ಅನಾಹುತಗಳು ಆಗಿವೆ.  ಸಂಕಷ್ಟಕ್ಕೆ ಒಳಗಾಗಿರುವ ದುಡಿಯುವ ಜನರಿಗೆ, ರೈತರಿಗೆ, ಕೃಷಿ ಕೂಲಿಕಾರರಿಗೆ ಸಹಾಯ ನೀಡಬೇಕು. ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

Related