ನಾಳೆ ಬಜೆಟ್‌ ಮಂಡನೆ

ನಾಳೆ ಬಜೆಟ್‌ ಮಂಡನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾಳೆ ಶುಕ್ರವಾರ 16ನೇ ತಾರೀಕಂದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳಿಂದ ಸಂಕಷ್ಟಕ್ಕೆ ಇದಾಗಿದೆ ಎಂದು ಈಗಾಗಲೇ ವಿರೋಧಪಕ್ಷಗಳು ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಬೆನ್ನಲ್ಲೇ ಬಜೆಟ್ ಮಂಡನೆ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರಕ್ಕೆ ಎಷ್ಟು ಮಂಡಿಸುತ್ತಾರೆ ಎಂದು ಕುತೂಹಲ ಕೆರಳಿಸಿದೆ.

ಹೌದು, 2024-25ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆ ಮಾಡಲಿದ್ದಾರೆ. ಇದು ಸಿದ್ದರಾಮಯ್ಯ ಅವರು ಹಣಕಾಸು ಮಂತ್ರಿಯಾಗಿ ಮಂಡಿಸುತ್ತಿರುವ ದಾಖಲೆಯ 15ನೇ ಬಜೆಟ್‌ ಆಗಿದ್ದು, ಎಲ್ಲರ ಕಣ್ಣು ಅದರ ಮೇಲೆ ನೆಟ್ಟಿದೆ.

2023-24ನೇ ಸಾಲಿನಲ್ಲಿ ಮಂಡನೆಯಾದ ಕಾಂಗ್ರೆಸ್‌ ಸರ್ಕಾರದ ಬಜೆಟ್‌ನಲ್ಲಿ ಸುಮಾರು 39 ಸಾವಿರ ಕೋಟಿ ರೂ. ಮೊತ್ತವನ್ನು ಪಂಚ ಗ್ಯಾರಂಟಿಗೆ ಮೀಸಲು ಇಡಲಾಗಿತ್ತು. ಆಗ ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ವಿದ್ಯುತ್‌ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆಗಳು ಮಾತ್ರ ಇದ್ದವು. ಯುವನಿಧಿ ಇನ್ನೂ ಆರಂಭವಾಗಿರಲಿಲ್ಲ. ಆಗ 2023ರ ಆಗಸ್ಟ್‌ನಿಂದ 2024ರ ಮಾರ್ಚ್‌ವರೆಗೆ ಎಂಟು ತಿಂಗಳ ಮಟ್ಟಿಗೆ ಮಾತ್ರ ಹಣಕಾಸು ಮೀಸಲು ಇಟ್ಟಿದ್ದರೆ ಸಾಕಿತ್ತು.

ಆದರೆ ಹೊಸದಾಗಿ ಮಂಡಿಸಬೇಕಾಗಿರುವ ಬಜೆಟ್‌ನಲ್ಲಿ ಯುವನಿಧಿಯೂ ಸೇರಿದಂತೆ ಎಲ್ಲಾ ಐದು ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಇಡೀ ವರ್ಷಕ್ಕೆ ಹಣಕಾಸು ನಿಗದಿ ಮಾಡಬೇಕಾಗಿದೆ. ಅಂದರೆ ಸುಮಾರು 60 ಸಾವಿರ ಕೋಟಿ ರೂ.ಯನ್ನು ಈ ಕಾರಣಕ್ಕಾಗಿಯೇ ಮೀಸಲು ಇಡಬೇಕಾಗಿದೆ. ಈ ಕಾರಣಕ್ಕಾಗಿ ಬಜೆಟ್‌ ಗಾತ್ರವನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಬೇಕಾಗಿದೆ. ಇನ್ನು ವೇತನ, ಬಡ್ಡಿ, ಪಿಂಚಣಿ, ಸಹಾಯಧನ ಒಳಗೊಂಡ ಬದ್ಧತಾ ವೆಚ್ಚವೂ ಗಣನೀಯವಾಗಿ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ.

Related