ಕೊರೋನಾ ನಿಂದ ತೊಂದರೆಗೊಳಗಾದವರಿಗೆ ಬಜೆಟ್ : ಟಿಎಸ್‌ಆರ್ ನಾಯಕಿ

ಕೊರೋನಾ ನಿಂದ ತೊಂದರೆಗೊಳಗಾದವರಿಗೆ ಬಜೆಟ್ : ಟಿಎಸ್‌ಆರ್ ನಾಯಕಿ

ಹೈದರಾಬಾದ್ : ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗೆ ನೆರವಾಗುವಂತಹ ಬಜೆಟ್ ಮಂಡನೆಯಾಗಬೇಕು ಎಂದು ತೆಲಂಗಾಣ ರಾಷ್ಟ್ರ ಸಮಿತಿ ಟಿಆರ್‌ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕವಿತಾ ಕಲ್ವಕುಂಟ್ಲಾ ಹೇಳಿದರು.

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವನ್ನು ಎದುರು ನೋಡುತ್ತಿದ್ದೇನೆ. ಹಣಕಾಸಿನ ಸವಾಲು ಇದೆ. 2020ರಲ್ಲಿ ಗಮನಾರ್ಹವಾದ ಸಮಸ್ಯೆಗಳಿಗೆ ತುತ್ತಾದವರಿಗಾಗಿ ಲಾಭದಾಯಕ ನಿರ್ಧಾರಗಳನ್ನು ಪ್ರಬುಧ್ದ ರೀತಿಯಲ್ಲಿ ಕೈಗೊಳ್ಳಬೇಕು. ಸಾಮಾಜಿಕ ಕಾರ್ಯಗಳಿಗೆ ಮಾಡುವ ಖರ್ಚಿನಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಭಾವಿಸುತ್ತೇನೆ. ಮೂಲಸೌಕರ್ಯ, ಆರೋಗ್ಯ ರಕ್ಷಣೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಮುಂದುವರಿಸಬೇಕು.

ಭಾರತ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ.
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

Related