ಮೊದಲ ದಲಿತ ಮಹಿಳೆ, ಬ್ರಿಟನ್ನ ಮೇಯರ್ ಆಗಿ ಆಯ್ಕೆ: ಮೊಹಿಂದರ್ ಕೌರ್ ಮಿಧಾ..

ಭಾರತದಲ್ಲಿ ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಜನರು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ವಿದೇಶಗಳಲ್ಲಿ ತಮ್ಮ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.ಬ್ರಿಟನ್ನ ಈಲಿಂಗ್ ನಗರದ ಮೇಯರ್ ಆಗಿ ಮೊಹಿಂದರ್ ಮಿಧಾರವರು ಆಯ್ಕೆ ಆಗುವುದರೊಂದಿಗೆ ಆ ಹುದ್ದೆಗೇರಿದ ಮೊದಲ ದಲಿತ ಮಹಿಳೆ ಎಂದು ಹಿರಿಮೆಗೆ ಪಾತ್ರರಾಗಿದ್ದಾರೆ.


ಪಶ್ಚಿಮ ಲಂಡನ್ನಲ್ಲಿರುವ ಸಿಟಿ ಆಫ್ ಈಲಿಂಗ್ ಮೊಹಿಂದರ್ ಕೌರ್ ಮಿಧಾ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿದೆ. ಮೊಹಿಂದರ್ ಕೌರ್ ಮಿಧಾ ಅವರು ಈಲಿಂಗ್ ಕೌನ್ಸಿಲ್ ಚುನಾವಣೆಯಲ್ಲಿ ಗರಿಷ್ಠ ಮತಗಳನ್ನು ಪಡೆದು 2022-23 ನೇ ಸಾಲಿನ ನಗರದ ಪ್ರಮುಖ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮೊಹಿಂದರ್ ಕೌರ್ ಮಿಧಾ ಇಂಗ್ಲೆಂಡ್ನಲ್ಲಿ ಮೇಯರ್ ಕುರ್ಚಿಯ ಮೇಲೆ ಕುಳಿತ ಮೊದಲ ದಲಿತ ಮಹಿಳೆ. ಈ ಸುದ್ದಿಯು ಬ್ರಿಟನ್ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅಂಬೇಡ್ಕರ್ವಾದಿಗಳ ಮುಖದಲ್ಲಿ ಮಂದಹಾಸವನ್ನು ತಂದಿದೆ ಎಂದು ದಿ ಶೂದ್ರ ವರದಿ ಮಾಡಿದೆ.

ಮೊಹಿಂದರ್ ಮಿಧಾರವರು ಈ ಹುದ್ದೆಗೇರುತ್ತಲೇ ಹಲವು ಅಂಬೇಡ್ಕರ್ವಾದಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಲಂಡನ್ ನಗರದ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತೆ ಸಂತೋಷ್ ದಾಸ್ ಈ ಕುರಿತು ಟ್ವೀಟ್ ಮಾಡಿದ್ದು, “ಕಳೆದ 5 ನಿಮಿಷಗಳಲ್ಲಿ, ಶ್ರೀಮತಿ ಮೊಹಿಂದರ್ ಕೌರ್ ಮಿಧಾ ಈಲಿಂಗ್ನ ಮೇಯರ್ ಆಗಿ ಆಯ್ಕೆಯಾದರು. ಯುಕೆಯಲ್ಲಿ ಪ್ರಥಮ ಬಾರಿಗೆ ದಲಿತ ಮಹಿಳೆಯೊಬ್ಬರು ಮೇಯರ್ ಆಗಿದ್ದಾರೆ. ಇದು ನಮಗೆ ಹೆಮ್ಮೆಯ ಕ್ಷಣ’ ಎಂದಿದ್ದಾರೆ.

Related