ಶಾಸಕರಿಂದ ಸೇತುವೆ ಕಾಮಗಾರಿ ಪರಿಶೀಲನೆ

ಶಾಸಕರಿಂದ ಸೇತುವೆ ಕಾಮಗಾರಿ ಪರಿಶೀಲನೆ

ಶಹಾಪೂರ : ತಾಲೂಕಿನ ಗೋಗಿ ಗ್ರಾಮದ ಸಿಂದಗಿ ಕೊಡಂಗಲ ಹೈವೇ ರಸ್ತೆ 20-21ನೇಯ ಸಾಲಿನಲ್ಲಿ 3054 ಯೋಜನೆಯ ಅಡಿಯಲ್ಲಿ ಲೋಪಕಾಯೋಗಿ ಇಲಾಖೆಯಿಂದ ಮಂಜೂರಾದ 50 ಲಕ್ಷ ರೂ. ವೆಚ್ಚದ ಸೇತುವೆ ಕಾಮಗಾರಿಯನ್ನು ಶಾಸಕ ಶರಣಬಸಪ್ಪ ಗೌಡ ದರ್ಶನಪೂರ್ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು ಹೆಚ್ಚು ವಾಹನಗಳು ಸಂಚರಿಸುವ ಸೇತುವೆಯಾಗಿದ್ದು ಗುಣಮಟ್ಟದ ವಸ್ತುಗಳನ್ನು ಬಳಸಿ. ಸರಿಯಾದ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಿವುಮಹಂತಪ್ಪ ಚಂದಾಪುರ, ಬಸವರಾಜಪ್ಪ ಗೌಡ ತಂಗಡಗಿ, ಗುತ್ತಿಗೆದಾರರಾದ ಚಂದ್ರಯ್ಯ ದೇವಂಗವ್ ಸೇರಿದಂತೆ ಇನ್ನಿತರರಿದ್ದರು.

Related