ಕಂಟಕ; ಮೈಸೂರಿಗರ ನಿರ್ಲಕ್ಷ್ಯವೇ ಅಪಾಯ!

ಕಂಟಕ; ಮೈಸೂರಿಗರ ನಿರ್ಲಕ್ಷ್ಯವೇ ಅಪಾಯ!

ಮೈಸೂರು : ಕೊರೋನಾ ದಿನೇದಿನೇ ಹೆಚ್ಚಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಕೇರಳ ಕೊರೊನಾ ಭಯ ವ್ಯಾಪಿಸಿದೆ. ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಕೇರಳದಿಂದ ಆಗಮಿಸುವ ಪ್ರವಾಸಿಗರ ಮೇಲೆ ಹದ್ದಿನಕಣ್ಣು ಇಡಲಾಗಿದ್ದು, ಪ್ರವಾಸಿಗರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಮೈಸೂರಲ್ಲಿ ನಡೆಯುವ ಸಭೆ ಸಮಾರಂಭದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಲಾಗಿದೆ.

ಅಲ್ಲದೇ ಬಾಣಸಿಗರ ಮೇಲೂ ನಿಗಾ ಇಡಲು ಸೂಚನೆ ಕೊಡಲಾಗಿದೆ. ಮತ್ತೊಂದೆಡೆ ಕೊರೋನಾ ನಿಯಮಗಳನ್ನೇ ಮೈಸೂರಿನ ಜನರು ಮರೆತಿದ್ದಾರೆ. ಚೀನಿ ಮಹಾಮಾರಿಗೆ ಬೆಚ್ಚಿಬಿದ್ದಿದ್ದ ಮೈಸೂರು ಕಳೆದ ವರ್ಷ ಭಾರಿ ಸಂಕಷ್ಟ ಅನುಭವಿಸಿತ್ತು. ಜ್ಯುಬಿಲಿಯೆಂಟ್ ಕಾರ್ಖಾನೆ ಯಡವಟ್ಟಿನಿಂದಲೂ ತೀವ್ರ ಭೀತಿ ಸೃಷ್ಟಿಸಿತ್ತು.

ಕೊರೋನಾ ಆತಂಕ ಕೊಂಚ ಕಡಿಮೆಯಾದ ಬಳಿಕ ರೂಲ್ಸ್ ಮರೆತ ಜನರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನೇ ಬಿಟ್ಟಿದ್ದಾರೆ. ಈಗ ಕೊರೊನಾ ಎರಡನೇ ಅಲೆ ಭೀತಿ ಆರಂಭವಾಗಿದ್ದು, ಮೈಸೂರಿಗೆ ಕಂಟಕವಾಗೋ ಸಾಧ್ಯತೆ ದಟ್ಟವಾಗಿದೆ.

ಹೊರ ರಾಜ್ಯದಿಂದ ಬರುವ ಪ್ರವಾಸಿಗರೇ ಕಂಟಕವಾಗಿದ್ದಾರೆ. ಪ್ರವಾಸೋದ್ಯಮ ಸುಧಾರಿಸಿದ್ದು ಒಂದೆಡೆಯಾದರೆ, ಕೊರೊನಾ ಆತಂಕವೂ ಹೆಚ್ಚಾಗಿದೆ. ಎಲ್ಲೆಡೆ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಮೈಸೂರು ಕೂಡ ಡೇಂಕರ್ ಝೋನ್‌ಗೆ ಸಿಲುಕುವ ಸಾಧ್ಯತೆ ಇದೆ.

Related