ಮಗುವಿನ ಆರೋಗ್ಯಕ್ಕೆ ಎದೆಹಾಲು ಅವಶ್ಯ!

ಮಗುವಿನ ಆರೋಗ್ಯಕ್ಕೆ ಎದೆಹಾಲು ಅವಶ್ಯ!

ರಾಯಚೂರು : ನಗರದಲ್ಲಿ ಮಗುವಿನ ವಿಕಾಸನಕ್ಕೆ ಮತ್ತು ಸದೃಢ ಆರೋಗ್ಯಕ್ಕೆ ತಾಯಿಯ ಎದೆಹಾಲು ಅತ್ಯಂತ ಮಹತ್ವದ್ದಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ಶ್ರೀಲತಾ ಅವರು ಹೇಳಿದರು.

ನಗರದಲ್ಲಿ ಇನ್ನರ್ ವೀಲ್ ಶಿಕ್ಷಣ ಸಂಸ್ಥೆ ವತಿಯಿಂದ ಶುಕ್ರವಾರ “ಸ್ತ್ರೀಯರ ಆರೋಗ್ಯ ಸಮಸ್ಯೆ ಮತ್ತು ಮಗುವಿನ ಪಾಲನೆ” ಕುರಿತು ಹಮ್ಮಿಕೊಂಡಿದ್ದ ಆನ್‌ಲೈನ್ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಎದೆಹಾಲಿನಲ್ಲಿ ಕಾರ್ಬೋಹೈಡ್ರೇಟ್ ಪ್ರೋಟೀನ್ ಮತ್ತು ಕೊಬ್ಬಿನ ಅಂಶಗಳು ಇರುವುದರಿಂದ ಮಕ್ಕಳ ಆರೋಗ್ಯ ವೃದ್ಧಿಯಾಗುತ್ತದೆ ಜತೆಗೆ ತಾಯಿಯಲ್ಲಿಯೂ ಕೂಡ ಆರೋಗ್ಯಕರ ಬದಲಾವಣೆಗಳು ಕಂಡು ಬರುತ್ತವೆ, ಇದ್ದರಿಂದ ತಾಯಂದಿರು ನವಜಾತ ಶಿಶುಗಳಿಗೆ ಸಮಯಕ್ಕೆ ಸರಿಯಾಗಿ ಹಾಲುಣಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಇನ್ನರ್ ವೀಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ.ಅರುಣಾ, ರೂಪಾ ದೋತರಬಂಡಿ, ರೂಪಾ ಪುಲ್ಸೆ, ಸುಷ್ಮಾ ಪತಾಂಗೆ, ರತ್ನಮಾಲಾ, ರಮೇಶ್, ಸರ್ವಮಂಗಳ ಚೆಟ್ಟಿ, ಡಾ.ನಾಗವೇಣಿ ಆಸ್ಪಲಿ, ಉಮಾದೇವಿ, ಸುಜಾತ ಸೇರಿದಂತೆ ಇತರರು ಇದ್ದರು.

Related