ಅನಗತ್ಯ ಓಡಾಟಕ್ಕೆ ಬ್ರೇಕ್

ಅನಗತ್ಯ ಓಡಾಟಕ್ಕೆ ಬ್ರೇಕ್

ನರಗುಂದ : ಪಟ್ಟಣದ ಸಿದ್ದನಬಾವಿ ಓಣೆಯ ಮಹಿಳೆಯೋರ್ವರಿಗೆ ಕಳೆದ ತಿಂಗಳು ಕೊರೋನಾ ಸೋಂಕು ಧೃಡಪಟ್ಟಿದ್ದರಿಂದ ಆ ಪ್ರದೇಶವನ್ನು ಇದುವರೆಗೂ ಕ್ವಾರೆಂಟೈನ್ ಮಾಡಿ ಜನ ಸಂಚಾರ ನಿಷೇಧಿಸಲಾಗಿತ್ತು.

ಜಿಲ್ಲಾಧಿಕಾರಿಗಳು ಗದಗನಲ್ಲಿ ಏರ್ಪಡಿಸಿದ್ದ ವಿಡಿಯೋ ಕಾನ್ಫರೆನ್ಸ್ ಪ್ರಸಾರ ಜು. 9 ರಂದು ನರಗುಂದ ಕಚೇರಿಯಲ್ಲಿ  ಸುದ್ದಿಗಾರರಿಗೆ ಮಾಹಿತಿ ನೀಡಿ ತಹಸೀಲ್ದಾರ ಎ.ಎಚ್. ಮಹೇಂದ್ರ ಅವರು, ಕೊರೋನಾ ತಡೆಗಾಗಿ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಜನತೆ ಸ್ವಯಂ ಕ್ವಾರೆಂಟೈನ್‌ಗೊಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಒಳಿತು. ಬೇಕಾ ಬಿಟ್ಟಿ ಅನಗತ್ಯವಾಗಿ ಎಲ್ಲೆಂದರಲ್ಲಿ ಸಂಚರಿಸುವುದರಿಂದ ಸೊಂಕು ತಗಲುವ ಸಾಧ್ಯತೆ ಇದೆ. ಸಾರ್ವಜನಿಕರು ಇದನ್ನು ಅರ್ಥಮಾಡಿಕೊಂಡು ಮನೆಯಲ್ಲಿ ಇರಬೇಕು. ಪಟ್ಟಣದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮಾತ್ರ ಮಾರುಕಟ್ಟೆ ತೆರೆಯಲು ಅವಕಾಶ ಮಾಡಲಾಗಿದೆ.

ಕೊರೋನಾ ಸೋಂಕಿತ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದ ಸುಮಾರು 52 ಜನರನ್ನು ತಾಲೂಕಿನ ಸಿದ್ದಾಪೂರ ಶಾಲೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಹೆಚ್ಚಿನ ಜನತೆಗೆ ವೈದ್ಯಕಿಯ ಪರೀಕ್ಷೆ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮನೆಗಳಿಗೆ ಕಳಿಸಲಾಗಿದೆ. ಇನ್ನು 10 ಜನರ ವರದಿ ನಿರೀಕ್ಷೆಯಲ್ಲಿದ್ದು ಸಿದ್ದಾಪೂರ ಶಾಲೆಯಲ್ಲಿ ಕ್ವಾರೆಂಟೈನ್‌ಲಿದ್ದಾರೆಂದು ತಹಸೀಲ್ದಾರರು ತಿಳಿಸಿದ್ದಾರೆ.

Related