ಅಕ್ರಮ ಮರಳು ಸಾಗಾಣಿಕೆಗೆ ಬ್ರೇಕ್

ಅಕ್ರಮ ಮರಳು ಸಾಗಾಣಿಕೆಗೆ ಬ್ರೇಕ್

ಕೊಟ್ಟೂರು : ಅಕ್ರಮ ಮರುಳು ಸಾಗಾಣಿಕೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮರುಳು ನೀತಿಗೆ 1 ಟನ್‌ಗೆ 300 ರೂ. ಲಭ್ಯವಿದೆ. 1 ಟ್ರಾಕ್ಟರ್ 3 ಟನ್ 900 ರೂ. ನೀಡಿ ಪಡೆಯಬಹುದು ಎಂದು ತಹಶೀಲ್ದಾರ್ ಹೇಳಿದರು.

ತಾಲೂಕಿನ ಕೊಗಳಿ ಗ್ರಾ.ಪಂಯ ಅಲಬೂರು ಗ್ರಾಮದ ಹಗರಿಹಳ್ಳದಲ್ಲಿ ಸರ್ಕಾರ ಹೊಸ ಮರಳು ನೀತಿಯ ನಿಕ್ಷೇಪ ಚಾಲನೆ ನೀಡಿ ಮಾತನಾಡಿ, ಕೋಗಳಿ ಹೋಬಳಿಯ ಅಲಬೂರು ಹಗರಿಹಳ್ಳದ ಮರಳು ನಿಕ್ಷೇಪ ಗುರುತಿಸಲಾಗಿದೆ.

ಸರ್ಕಾರದ ಹೊಸ ಮರಳು ನೀತಿಯ ಮೇರೆಗೆ ಗ್ರಾ.ಪಂಗೆ ಆರ್ಥಿಕ ಸಬಲೀಕರಣಕ್ಕಾಗಿ ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಅದರಂತೆ ಮರಳು ಪಡೆಯಲು ಉದ್ದೇಶದೊಂದಿಗೆ ಗ್ರಾ.ಪಂ ಪಿಡಿಒಗೆ ಅರ್ಜಿ ಸಲ್ಲಿಸಿ ಪ್ರತಿ ಟನ್‌ಗೆ 300 ರೂ. ನೀಡಿ ಪಡೆಯಬಹುದು. ಅಂದರೆ 1 ಟ್ರಾಕ್ಟರ್‌ಗೆ 3 ಟನ್ 900 ರೂ. ಅತಿ ಕಡಿಮೆ ಬೆಲೆಯಲ್ಲಿ ಮರಳು ಲಭ್ಯವಾಗಲಿದ್ದು, ಅಕ್ರಮ ಸಾಗಾಣಿಕೆಗೆ ಕಡಿವಾಣ ಬೀಳಲಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್. ತಿಮ್ಮಣ್ಣ ಪರ್ಮಿಟ್ ಚೀಟಿ ನೀಡುವ ಮೂಲಕ ಮರಳು ನಿಕ್ಷೇಪಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹೊಸಪೇಟೆಯ ಅಧಿಕಾರಿಗಳಾದ ಕೀರ್ತಿ ಕುಮಾರ್, ಹರ್ಷವರ್ಧನ, ಮಂಜುನಾಥ ಗುಡಗೂರು, ಅಲಬೂರು ಗ್ರಾ.ಪಂ ಅಧ್ಯಕ್ಷ ಎ. ಶಿವಾನಂದಪ್ಪ, ಪಿಡಿಒ ಮಾಧವಿ. ಕೆ. ವೈ, ಕಾರ್ಯದರ್ಶಿ ಜ್ಞಾನೇಶ್ವರಯ್ಯ, ಕೋಗಳಿ ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಗ್ರಾಮ ಲೆಕ್ಕಿಗರಾದ ಮಂಗಳ. ಎಂ, ನರೇಗಾ ನಿರ್ದೇಶಕ ಕೆಂಚಪ್ಪ ಹಾಜರಿದ್ದರು.

Related