ಆರ್​ಸಿಬಿ ಲುಕ್​ಗೆ ಬೌಲ್ಡ್

ಆರ್​ಸಿಬಿ ಲುಕ್​ಗೆ ಬೌಲ್ಡ್

ಬೆಂಗಳೂರು, ಫೆ. 15 : ಆರ್​ಸಿಬಿ ಹೊಸ ಲೋಗೋ ಬಿಡುಗಡೆ ಮೂಲಕ ಉತ್ತರ ಕೊಟ್ಟಿದೆ. ನ್ಯೂ ಆರ್​ಸಿಬಿ, ನ್ಯೂ ಲೋಗೋ, ಹೊಸ ದಶಕ ಅಂತಾ ಟ್ವಿಟರ್​ ಅಕೌಂಟ್​​ನಲ್ಲಿ ಬರೆದುಕೊಂಡಿರುವ ಆರ್​ಸಿಬಿ, ತನ್ನ ಲೋಗೋದಲ್ಲಿ ಸಿಂಹವೂ ಗೋಲ್ಡನ್​ ಕಲರ್​ನಲ್ಲಿದೆ. ಜೊತೆಗೆ ಸಿಂಹದ ತಲೆಯ ಮೇಲೆ ಕಿರೀಟವನ್ನ ಇರಿಸಲಾಗಿದೆ. ಕೆಳಗೆ ಅರ್ಧಚಂದ್ರಾಕೃತಿಯ ಮಧ್ಯದ ಒಳಗೆ ಸಿಂಹ ಘರ್ಜಿಸುತ್ತಿರುವ ಭಂಗಿಯ ಲೋಗೋ ಬಿಡುಗಡೆ ಮಾಡಿದೆ. ಈ ಮೂಲಕ 13ನೇ ಆವೃತ್ತಿಯಲ್ಲಿ ಹೊಸತನದೊಂದಿಗೆ ಕಪ್​ ಗೆದ್ದೇ ಗೆಲ್ಲಿತ್ತೇವೆ ಎಂಬ ಭರವಸೆ ನೀಡಿದೆ.

 

ಕೆಲ ದಿನಗಳ ಹಿಂದೆ ರಾಯಲ್ ಚಾಲೆಂಜರ್ಸ್ ಎಂದು​​ ನಾಮಕಾರಣ ಮಾಡಿಕೊಂಡಿದ್ದ ಆರ್​ಸಿಬಿ.. ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿತ್ತು. ಬೆಂಗಳೂರು ಎಂಬ ಹೆಸರು ತೆಗೆಯದಂತೆ ಆರ್​​ಸಿಬಿ ಫ್ಯಾನ್ಸ್​ ಮನವಿ ಮಾಡಿದ್ರು.

Related