2023ರ ಚುನಾವಣಾ ಸಮರಕ್ಕೆ ಬೊಮ್ಮನಹಳ್ಳಿ ಸಜ್ಜು

2023ರ ಚುನಾವಣಾ ಸಮರಕ್ಕೆ ಬೊಮ್ಮನಹಳ್ಳಿ ಸಜ್ಜು

ಬೊಮ್ಮನಹಳ್ಳಿ: ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಬೊಮ್ಮನಹಳ್ಳಿ ಕ್ಷೇತ್ರ ಕರ್ನಾಟಕ ಕ್ಷೇತ್ರಗಳ 224 ಪೈಕಿ ಒಂದು. ಕಳೆದ ಬಾರಿ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ಜಯ ಗಳಿಸಿದ್ದರು.

2023ರ ಸಾಲಿನ ಚುನಾವಣಾ ಪ್ರಚಾರಕ್ಕೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡುವ ಅಂಗವಾಗಿ ಹೊಂಗಸಂದ್ರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಗೋಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಕಳೆದ ಬಾರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಂ ಸತೀಶ್ ರೆಡ್ಡಿ ಅವರು ಜಯಸಾಧಿಸಿದ್ದು, ಅವರು ಹಲವಾರು ರೀತಿಯ ಕಾರ್ಯಗಳನ್ನು ಮಾಡಿದ್ದು 2023ರ ಚುನಾವಣೆಯಲ್ಲಿ ಸಹ ಸತೀಶ್ ರೆಡ್ಡಿಯವರೇ ಗೆಲ್ಲಬೇಕೆಂದು ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಇಂದಿನಿಂದ ಪ್ರಚಾರ ಕೈಗೊಂಡಿದ್ದಾರೆ.

ಈ ಸಂದರ್ಬದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರು,ಮಾಜಿ ನಗರಸಭಾ ಸದಸ್ಯರು ಬಿಜೆಪಿ ಮುಖಂಡರು,ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧು ಮಿತ್ರರು ಉಪಸ್ಥಿತರಿದ್ದರು. ಬೊಮ್ಮನಹಳ್ಳಿ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಿ.

Related