ಬಾಲಿವುಡ್ ನಟ ಆತ್ಮಹತ್ಯೆಗೆ ಶರಣು

ಬಾಲಿವುಡ್ ನಟ ಆತ್ಮಹತ್ಯೆಗೆ ಶರಣು

ಬಾಲಿವುಡ್ ನಟ ಆಸಿಫ್ ಬಾಸ್ರಾ ಗುರುವಾರ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಷ್ಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನು ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದಾರೆ. ನಟ ಆಸಿಫ್ ಬಸ್ರಾ ಕಳೆದ 5 ವರ್ಷಗಳಿಂದ ಮೆಕ್ಲಿಯೋಡ್‌ಗಂಜ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರೊಂದಿಗೆ ವಿದೇಶಿ ಗೆಳತಿ ಇದ್ದಳು ಎನ್ನಲಾಗಿದೆ.

ಆಸಿಫ್ ಬಾಸ್ರಾ ಯುಕೆ ಮೂಲದ ಮಹಿಳೆಯೊಂದಿಗೆ ಮೆಕ್ಲಿಯೋಡ್ ಗಂಜ್ನಲ್ಲಿ ಲಿವ್ ಇನ್ ನಲ್ಲಿದ್ದರು. ಗುರುವಾರ ಮಧ್ಯಾಹ್ನ ಅವರು ತಮ್ಮ ಸಾಕು ನಾಯಿ ಜೊತೆ ಹೊರಗೆ ಹೋಗಿದ್ದರು. ವಾಪಸ್ ಬಂದವರು ನೇಣಿಗೆ ಶರಣಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಖಿನ್ನತೆಗೆ ಬಲಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

Related