ಬಿಎಂಟಿಸಿ ಮತ್ತೊಂದು ಎಡವಟ್ಟು

ಬಿಎಂಟಿಸಿ ಮತ್ತೊಂದು ಎಡವಟ್ಟು

ಬೆಂಗಳೂರು : ಲಾಕ್‌ಡೌನ್ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಚಯಿಸಿರುವ ವಾರದ ಪಾಸ್‌ನಲ್ಲಿ ದಿನಾಂಕ ನಮೂದಿಸದೆ ಮತ್ತೊಂದು ಎಡವಟ್ಟು ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಜಟಾಪಟಿಗೆ ಆಸ್ಪದ ಮಾಡಿಕೊಡಲಾಗಿದೆ.

ನೂತನ ವಾರದ ಪಾಸಿನಲ್ಲಿ ಸ್ಪಷ್ಟವಾದ ದಿನಾಂಕವನ್ನು ನಮೂದಿಸದೆ. ದಿನದ ಪಾಸುಗಳ ರೀತಿಯಲ್ಲಿ ಪ್ರಯಾಣಿಕರಿಗೆ ವಿತರಿಸಲಾಗುತ್ತಿದೆ. ಇದು ಗೊಂದಲಕ್ಕೆ ಕಾರಣವಾಗಿದ್ದು, ನಿರ್ವಾಹಕರು ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪ ಮಾಡುತ್ತಿದ್ದಾರೆ.

ಪಾಸಿನಲ್ಲಿ 1 ರಿಂದ 31ನೇ ತಾರೀಖಿನವರೆಗೂ ಮುದ್ರಿಸಲಾಗಿದೆ. ಆದರೆ, ವಾರದ ಪಾಸುಗಳಲ್ಲಿ ಯಾವುದೇ ರೀತಿಯ ದಿನಾಂಕವನ್ನು ನಮೂದಿಸುತ್ತಿಲ್ಲ, ಕೌಂಟರ್‌ಗಳಲ್ಲಿ ಪಾಸುಗಳನ್ನು ವಿತರಿಸುವವರು ಕನಿಷ್ಠ ಪಕ್ಷ ಒಂದು ಸಂಕೇತವನ್ನು ಕೂಡಾ ಮುದ್ರಿಸುತ್ತಿಲ್ಲ. ಇವುಗಳನ್ನು ನಿರ್ವಾಹಕರಿಗೆ ತೋರಿಸಿದರೆ ದಿನಾಂಕ ಇಲ್ಲ ಎಂದು ಮಾಡುತ್ತಿಲ್ಲ. ಈ ಬಗ್ಗೆ ಕೌಂಟರ್‌ನವರನ್ನು ಕೇಳಬೇಕಿತ್ತು ಎಂದು ನಿರ್ವಾಹಕರು ವಿನಾಕಾರಣ ತೊಂದರೆಯುAಟು ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ನಿರ್ವಾಹಕರನ್ನು ಪ್ರಶ್ನಿಸಿದರೆ, ವಾರದ ಪಾಸು ಪಡೆಯುವ ಪ್ರಯಾಣಿಕರೇ ಈ ಬಗ್ಗೆ ಕೌಂಟರ್ ಗಳಲ್ಲಿ ಬಗೆಹರಿಸಿಕೊಳ್ಳಬೇಕು, ಅದು ಅವರ ಜವಾಬಾಬ್ದಾರಿ, ಅದಕ್ಕೂ ನಮಗೂ ಯಾವುದೇ ಸಂಬAಧವಿಲ್ಲ ಎಂಬAತಹ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

ಒಟ್ಟಾರೇ, ಬಿಎಂಟಿಸಿ ಮತ್ತೊಂದು ಯಡವಟ್ಟಿನಿಂದ ಲಾಕ್‌ಡೌನ್ ಕೆಲಸವಿಲ್ಲದೆ ಕಳೆದೆರಡು ತಿಂಗಳಿನಿAದ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದ ಪ್ರಯಾಣಿಕರು ಇದೀಗ ಆರಾಮಾಗಿ ಕೆಲಸಕ್ಕೂ ಹೋಗದಂತಾಗಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆ ಹರಿಸಬೇಕಾಗಿದೆ.

Related