ಅಂಗವಿಕರ ಪಾಸ್ ಇದ್ದರೂ ಬಸ್‍ಗೆ ನೋ ಎಂಟ್ರಿ

ಅಂಗವಿಕರ ಪಾಸ್ ಇದ್ದರೂ ಬಸ್‍ಗೆ ನೋ ಎಂಟ್ರಿ

ಬೆಂಗಳೂರು: ಬಿಎಂಟಿಸಿ ಬಸ್‍ನಲ್ಲಿ ವಿಕಲಚೇತನರ ಪಾಸ್ ಪ್ರಯೋಜನವಾಗುತ್ತಿಲ್ಲವಾ?? ಹೀಗೊಂದು ಪ್ರಶ್ನೆ ಮೂಡುತ್ತಿದೆ. ಯಾಕೆಂದರೆ ಬೆಂಗಳೂರಿನಲ್ಲಿಂದು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲು ಬಂದ ವಿಕಲಚೇತನ ಪ್ರಯಾಣಿಕರಿಗೆ ದೊರೆತಿರುವ ವರ್ಷದ ಪಾಸ್ ತೋರಿಸಿದರೆ ಅದನ್ನು ಕಂಡಕ್ಟರ್ ಒಪ್ಪುತ್ತಿಲ್ಲ.

ವಿಕಲಚೇತನ ಪ್ರಯಾಣಿಕರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲು ಬಂದಾಗ ಕಂಡಕ್ಟರ್ ಉತ್ತರ ಕೇಳಿ ಗಾಬರಿಯಾಗಿದ್ದಾರೆ. ವಿಕಲಚೇತನರಿಗಾಗಿಯೇ ಒಂದು ವರ್ಷದ ಪಾಸ್ ನ್ನು ಬಿಎಂಟಿಸಿ ನೀಡುತ್ತಿದೆ. 660 ರೂಪಾಯಿ ರಿಯಾಯತಿ ಪಾಸ್ ಪಡೆದು ಬಿಎಂಟಿಸಿ ಬಸ್‍ನಲ್ಲಿ ವಿಕಲಚೇತನರು ಪ್ರಯಾಣ ಮಾಡುತ್ತಿದ್ದಾರೆ.

ವಿಕಲಚೇತನರು ಬೆಂಗಳೂರು ಮೆಜೆಸ್ಟಿಕ್ ಸ್ಟಾಪ್ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಕಡೆ ತೆರಳುವ ಬಸ್ ಹತ್ತಿ ಕುಳಿತಿದ್ದಾರೆ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗ, ತಾವು ಪಡೆದಿರುವ ವಿಕಲಚೇತನ ಪಾಸ್ ತೋರಿಸಿದ್ದಾರೆ. ಇದನ್ನು ನೋಡಿದ ಕಂಡಕ್ಟರ್ ಈ ಪಾಸ್ ಈಗ ನಡೆಯುವುದಿಲ್ಲ ಎಂದಿದ್ದಾರೆ.

ಟಿಕೆಟ್ ತಗೊಳ್ಳಿ ಎಂದೇಳಿದ್ದು ಕೇಳಿ ವಿಕಲಚೇತನ ಗುಂಡೂರಾವ್ ಅವರನ್ನು ಕೇಳಿದ್ದಾರೆ. ವಿಕಲಚೇತನರಿಗೂ ಬಿಎಂಟಿಸಿ ಮಹಾಮೋಸ ಮಾಡುತ್ತಿದೆ. ಒಂದು ವರ್ಷದ ಅಂಗವಿಕರ ಪಾಸ್ ಹೊಂದಿದ್ದರೂ ಬಸ್‍ಗೆ ನೋ ಎಂಟ್ರಿ. ಟಿಕೆಟ್ ಖರೀದಿಸಿ, ಇಲ್ಲ ದಿನದ ಪಾಸ್ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ ಕಂಡಕ್ಟರ್. ಡೈಲಿ ಪಾಸ್ ಇಲ್ಲದಿದ್ರೆ ಅರ್ಧದಲ್ಲೇ ಇಳಿಸುತ್ತಿದ್ದಾರೆ.

Related