ಬಿಜೆಪಿಗರಿಗೆ ಒಳ್ಳೆಯ ಚಿಕಿತ್ಸೆ ಅಗತ್ಯವಿ: ರಾಮಲಿಂಗಾರೆಡ್ಡಿ

ಬಿಜೆಪಿಗರಿಗೆ ಒಳ್ಳೆಯ ಚಿಕಿತ್ಸೆ ಅಗತ್ಯವಿ: ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷದವರಿಗೆ ಕಾಮಾಲೆ ರೋಗ ಇದ್ದಂತೆ ಕಾಣುತ್ತಿದೆ. ಹಾಗಾಗಿ ಅವರಿಗೆ ಒಳ್ಳೆ ಚಿಕಿತ್ಸೆ ಅಗತ್ಯವಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಸರ್ಕಾರ ಕಾಂಗ್ರೆಸ್ ನೀಡುತ್ತಿರುವ ಜನಪರ ಆಡಳಿತ ಸಹಿಸದೆ ವ್ಯಥಾ ಆರೋಪ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಯಾವುದೇ ವಿಷಯಗಳೂ ಅವರಿಗೆ ಸಿಗುತ್ತಿಲ್ಲ. ಹಾಗಾಗಿ ಜನರ ಮನಸಿನಲ್ಲಿ ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದೆ.

ಆದರೆ ಬಿಜೆಪಿ ಹೇಳಿದ್ದನ್ನೆಲ್ಲಾ ನಂಬುವಷ್ಟು ಜನ ಮೂರ್ಖರಲ್ಲ. ಅವರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಕಾಂಗ್ರೆಸ್ ನ ಅಸಲಿಯತ್ತು ಗೊತ್ತು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇಂದು ನಗರದಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರಿಗೆ ಕಾಮಾಲೆ ಕಣ್ಣಿನ ಕಾಯಿಲೆ ಎನಿಸುತ್ತೆ.

ಅರಗ ಜ್ಞಾನೇಂದ್ರ ಅವರಂಥ ಮಾಜಿ ಗೃಹಮಂತ್ರಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮೈಬಣ್ಣದ ಬಗ್ಗೆ ಮಾತನಾಡುತ್ತಾರೆಂದ್ರೆ ಅವರ ನೀಯತ್ತು ಎಷ್ಟು ಕೆಟ್ಟಿದೆ ಎನ್ನುವುದು ಗೊತ್ತಾಗುತ್ತೆ. ಬಿಜೆಪಿಗರಿಗೆ ಒಳ್ಳೆಯ ಚಿಕಿತ್ಸೆ ಅಗತ್ಯವಿದ್ದು ಅದಕ್ಕೆ ಬೇಕಾದ ಖರ್ಚನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು.

ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಈವರೆಗೆ 32 ಕೋಟಿಯಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ. ನಾಲ್ಕು ನಿಗಮಗಳಿಗೆ ಇದರಿಂದ ಹೊರೆಯಾಗುತ್ತೆ.. ಸಂಬಳ ಕೊಡೊಕ್ಕೆ ಆಗೊಲ್ಲ ಎಂದು ಬಿಜೆಪಿ ಹೇಳುತ್ತಿರುವುದರಲ್ಲಿ ಹುರುಳೇ ಇಲ್ಲ. ಬಿಜೆಪಿ ಅವಧಿಯಲ್ಲಿ ಸಂಬಳ ತಡವಾಗುತ್ತಿತ್ತು. ಆದರೆ ನಮ್ಮ ಅವಧಿಯಲ್ಲಿ ಸಂಬಳ ನಿಯತವಾಗಿ ದೊರೆಯುತ್ತಿದೆ ಎಂದರು.

Related