ಬಿಜೆಪಿ ನಾಯಕನ ಮನೆಯಲ್ಲಿ ಮೋದಿ ಪ್ರತಿಮೆ..!!

ಬಿಜೆಪಿ ನಾಯಕನ ಮನೆಯಲ್ಲಿ ಮೋದಿ ಪ್ರತಿಮೆ..!!

ಬಿಜೆಪಿ ನಾಯಕ ರಾಘವೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಳೆತ್ತರ ಪ್ರತಿಮೆ ಸ್ಥಾಪಿಸಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀಪುರದಲ್ಲಿರುವ ರಾಘವೇಂದ್ರ ಶೆಟ್ಟಿ ಅವರ ಮನೆ ಗೃಹಪ್ರವೇಶ ನಡೆದಿದೆ. ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆ ಸ್ಥಾಪಿಸಲಾಗಿದೆ.

ಬೆಂಗಳೂರು, ಜೂ 11 : ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಭಾವಿ ನಾಯಕರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರಿಗೆ ಬಿಜೆಪಿ ನಾಯಕರು ಕಾರ್ಯಕರ್ತರಷ್ಟೇ ಅಲ್ಲ, ಅದರ ಹೊರತಾಗಿಯೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲೂ ಕೋಟ್ಯಾಂತರ ಸಂಖ್ಯೆಯ ಮೋದಿ ಫಾಲೋವರ್ಸ್ ಇದ್ದಾರೆ. ಅದೆಷ್ಟೋ ಮಂದಿ ಮೋದಿ ಹಾವಭಾವ, ಉಡುಗೆ ತೊಡುಗೆ, ಸ್ಟೈಲ್ಗಳನ್ನು ಅನುಕರಿಸುತ್ತಾರೆ. ಅದೆಷ್ಟೋ ಮಂದಿ ಮೋದಿಯವರನ್ನು ಆರಾಧಿಸುತ್ತಾರೆ. ಇದೀಗ ಬಿಜೆಪಿ ನಾಯಕರೊಬ್ಬರು ತಮ್ಮ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಳೆತ್ತರದ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ.

 

Related