ಸದನದಲ್ಲಿ ಮರಾಠಿ ಭಾಷೆ ಮಾತನಾಡಿದ ಬಿಜೆಪಿ ಶಾಸಕ

ಸದನದಲ್ಲಿ ಮರಾಠಿ ಭಾಷೆ ಮಾತನಾಡಿದ ಬಿಜೆಪಿ ಶಾಸಕ

ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕರು ಮರಾಠಿ ಭಾಷೆ ಮಾತನಾಡಿದ್ದರಿಂದ ಇಡೀ ಸದನದಲ್ಲಿದ್ದ ಜನರು ತಬ್ಬಿಬ್ಬಾಗಿದ್ದಾರೆ.

ಹೌದು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಏಕಾಏಕಿ ಮರಾಠಿ ಭಾಷೆ ಕೇಳಿ ಸ್ಪೀಕರ್ ಯುಟಿ ಖಾದರ್ ಸೇರಿದಂತೆ ಸದಸ್ಯರು ತಬ್ಬಿಬ್ಬಾದ ಘಟನೆ ಇಂದು ನಡೆದಿದೆ.

ಸದನದಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಬಿಜೆಪಿಯ ಖಾನಾಪುರ ಶಾಸಕ ವಿಠಲ್ ಹಲಗೇಕರ್ ಅವರು ಮರಾಠಿ ಭಾಷೆಯಲ್ಲಿ ಮಾತಾಡಿದರು. ತನ್ನ ವಿಧಾನಸಭಾ ಕ್ಷೇತ್ರದಲ್ಲಿ ಮರಾಠಿ ಶಾಲೆಗೆ ಮರಾಠಿ ಭಾಷಾ ಹಿನ್ನೆಲೆಯ ಶಿಕ್ಷಕರನ್ನು ನೇಮಕ ಮಾಡಬೇಕು, ಮರಾಠಿ ಭಾಷೆ ಬೋಧನೆಗೆ ಕನ್ನಡಿಗ ಶಿಕ್ಷಕ ಬೇಡ ಎಂದು ಖಾನಾಪುರ ಶಾಸಕ ವಿಠಲ್ ಹಲಗೇಕರ್ ಎಂದು ಒತ್ತಾಯಿಸಿದರು.

 

Related