ಬಿಜೆಪಿ ಮನಿ ಲಾಂಡರಿಂಗ್‌ನಲ್ಲಿ ತೊಡಗಿದೆ: ಗುಂಡೂರಾವ್‌

ಬಿಜೆಪಿ ಮನಿ ಲಾಂಡರಿಂಗ್‌ನಲ್ಲಿ ತೊಡಗಿದೆ: ಗುಂಡೂರಾವ್‌

ಮಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಿದ್ದಾರೆ.

ಇನ್ನು ಲೋಕಸಭಾ ಚುನಾವಣೆ ಮನದಲ್ಲಿಟ್ಟುಕೊಂಡು ಬಿಜೆಪಿ ಪಕ್ಷವು ನಷ್ಟದಲ್ಲಿರುವ ಕಂಪನಿಗಳಿಗೆ ಕೋಟ್ಯಾಂತರರು ಹಣವನ್ನು ಚುನಾವಣಾ ಬಾಂಡ್‌ ರೂಪದಲ್ಲಿ ಪಡೆದುಕೊಂಡಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರವರು ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನನ್ನು ಉಪಯೋಗಿಸಿ ಬಿಜೆಪಿ ಬಹುದೊಡ್ಡ ಲೂಟಿಯಲ್ಲಿ ತೊಡಗಿದೆ ಎಂದು ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ. ಶೂನ್ಯ ಲಾಭ ಅಥವಾ ನಷ್ಟದಲ್ಲಿರುವ 33 ಕಂಪೆನಿಗಳು ಬಿಜೆಪಿಗೆ 434.2 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ ಮೂಲಕ ನೀಡಿವೆ. ಅಲ್ಲದೆ, ಹಲವು ಕಂಪೆನಿಗಳು ಲಾಭಕ್ಕಿಂತ ಹೆಚ್ಚಿನ ಮೊತ್ತವನ್ನು ಅಂದರೆ 601 ಕೋಟಿ ಯನ್ನು ಬಿಜೆಪಿಗೆ ನೀಡಿವೆ. ಲಾಭವೇ ಇಲ್ಲದ್ದರೆ ಹಣ ಕೊಡೋದು ಹೇಗೆ? ಇಂಥ ಕಂಪೆನಿಗಳನ್ನು ಉಪಯೋಗಿ ಬಿಜೆಪಿ ಮನಿ ಲಾಂಡರಿಂಗ್‌ನಲ್ಲಿ ತೊಡಗಿದೆ ಎಂದು ಆರೋಪಿಸಿದರು.

 

Related