ಲವ್ ಜಿಹಾದ್ ಕಾನೂನಿನ ಬಗ್ಗೆ ಸ್ಪಷ್ಟಪಡಿಸಿದ ಬಿಜೆಪಿ

ಲವ್ ಜಿಹಾದ್ ಕಾನೂನಿನ ಬಗ್ಗೆ  ಸ್ಪಷ್ಟಪಡಿಸಿದ  ಬಿಜೆಪಿ

ನವದೆಹಲಿ : ಬಿಜೆಪಿ ಮಿತ್ರ ಪಕ್ಷ ಜೆಡಿಯು ಲವ್ ಜಿಹಾದ್ ವಿರುದ್ಧ, ವಿವಾಹಕ್ಕಾಗಿ ಮತಾಂತರಗೊಳ್ಳುವುದನ್ನು ನಿರ್ಬಂಧಿಸುವ ಕಾಯ್ದೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಮಾತನಾಡಿರುವ ಕೆಸಿ ತ್ಯಾಗಿ, ಲವ್ ಜಿಹಾದ್, ವಿವಾಹಕ್ಕಾಗಿ ಮತಾಂತರದ ಕಾನೂನು ಸಮಾಜದಲ್ಲಿ ದ್ವೇಷ ಮೂಡಿಸುತ್ತದೆ.

ಲವ್ ಜಿಹಾದ್ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಹಾಗೂ ವಿಭಜನೆಯನ್ನು ಸೃಷ್ಟಿಸಲಾಗುತ್ತಿದೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮತಾಂತರಗೊಳಿಸುವುದಕ್ಕಾಗಿ ಪ್ರೀತಿಸುವುದನ್ನು ಲವ್ ಜಿಹಾದ್ ಪದವನ್ನು ಬಲಪಂಥೀಯ ಕಾರ್ಯಕರ್ತರು ಸೃಷ್ಟಿಸಿದರು.

ವಯಸ್ಕರು ಯಾರು ತಮ್ಮ ಸಂಗಾತಿಯಾಗಬೇಕೆAದು ಬಯಸುತ್ತಾರೋ ಅವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಂವಿಧಾನ ಹಾಗೂ ಸಿಆರ್ ಪಿಸಿ ಸ್ವಾತಂತ್ರ‍್ಯ ನೀಡಿದೆ. ಈ ಸ್ವಾತಂತ್ರ‍್ಯವನ್ನು ರಾಮ್ ಮನೋಹರ್ ಲೋಹಿಯಾ ಆದಿಯಾಗಿ ಸಮಾಜವಾದಿಗಳು ಎಂದಿಗೂ ಎತ್ತಿ ಹಿಡಿದಿದ್ದಾರೆ ಎಂದು ತ್ಯಾಗಿ ಹೇಳಿದರು.

Related