ಗೃಹ ಜ್ಯೋತಿ ಯೋಜನೆಯಿಂದ ಬಿಗ್ ಶಾಕ್!

ಗೃಹ ಜ್ಯೋತಿ ಯೋಜನೆಯಿಂದ ಬಿಗ್ ಶಾಕ್!

ಬೆಂಗಳೂರು: ರಾಜ್ಯ ಸರ್ಕಾರ ಚುನಾವಣೆಗು ಮುನ್ನ ತನ್ನ ಪ್ರಣಾಳಿಕೆಯನ್ನು ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಈಗಾಗಲೇ 4 ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಇನ್ನು ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜೋತಿ ಯೋಜನೆಯನ್ನು ಮಧ್ಯಮ ವರ್ಗದವರ ಜನರುಗೆ ಉಪಯೋಗವಾಗಲೆಂದು  ಜಾರಿ ಮಾಡಿರುವ ಯೋಜನೆಯನ್ನು ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ತನ್ನು ಬಳಸಿದರೆ ಅವರಿಗೆ ಕರೆಂಟ್ ಬಿಲ್ ಪಾವತಿ ಮಾಡಲಾಗುತ್ತಿದೆ.

ಹೌದು, ಸರ್ಕಾರ ಉಚಿತ ವಿದ್ಯುತ್‌ ಕೊಡುತ್ತಿದೆ ಎಂದು ಅಳತೆ ಮೀರಿ ಬಳಸಿ ದುಂದು ವೆಚ್ಚಕ್ಕೆ ಮುಂದಾದರೆ ಆ ಹೆಚ್ಚುವರಿ ಹಣವನ್ನು ನೀವೇ ಪಾವತಿಸಬೇಕಾಗುತ್ತದೆ ಎಚ್ಚರ!

ಬಡವರು, ಕೆಳ ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನ ನಿರ್ವಹಣೆಯ ಪ್ರಯಾಸ ತಗ್ಗಿಸಲು ರಾಜ್ಯ ಸರಕಾರ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಉಚಿತ ಯೋಜನೆಗಳು ದುಂದು ವೆಚ್ಚ ಹಾಗೂ ದುರುಪಯೋಗಕ್ಕೂ ದಾರಿ ಮಾಡಿಕೊಡುವ ಮುನ್ನೆಚ್ಚರಿಕೆಯಿಂದ ಸರಕಾರ ಎಚ್ಚರಿಕೆ ವಹಿಸಿದೆ.

ಫ್ರೀ ಕರೆಂಟ್ ಅಂತ ಬೇಕಾಬಿಟ್ಟಿ ವಿದ್ಯುತ್ ಬಳಸಿದವರಿಗೆ ಸರ್ಕಾರದಿಂದ ಶಾಕ್ ನೀಡಲಾಗಿದೆ. ಗೃಹಜ್ಯೋತಿಯ ಮೊದಲ ತಿಂಗಳಲ್ಲೇ 45ಲಕ್ಷಕ್ಕೂ ಅಧಿಕ ಮಂದಿಗೆ ಪೂರ್ಣ ಬಿಲ್ ಬಂದಿದ್ದು ಮಿತಿ ಮೀರಿ ಕರೆಂಟ್ ಬಳಕೆ ಮಾಡಿದ ಜನರಿಗೆ ಫುಲ್ ಬಿಲ್ ನೀಡಿರುವ ಎಸ್ಕಾಂಗಳು

ಜುಲೈ ತಿಂಗಳ ಉಚಿತ ವಿದ್ಯುತ್ ಗಾಗಿ 1,40,31,320 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ಇಶ್ಯೂ ಮಾಡಿರುವ ಎಸ್ಕಾಂಗಳು ಉಳಿದಂತೆ 45,29,633 ಬಳಕೆದಾರರಿಗೆ ಸಂಪೂರ್ಣ ಬಿಲ್ ಕೊಟ್ಟಿರುವ ಎಸ್ಕಾಂಗಳು.

ವಾರ್ಷಿಕ ಸರಾಸರಿ 200 ಯೂನಿಟ್ ಒಳಗಿದ್ದರೂ 45 ಲಕ್ಷಕ್ಕೂ ಅಧಿಕ ಮಂದಿಗೆ ಸಿಕ್ಕಿಲ್ಲ ಶೂನ್ಯ ಬಿಲ್ ಬಂದಿದ್ದು ವಾರ್ಷಿಕ ಸರಾಸರಿ ನಿಗದಿತ ಯೂನಿಟ್ ಒಳಗಿದ್ದರೂ ಜುಲೈ ತಿಂಗಳಲ್ಲಿ ಮಾತ್ರ ಸರಾಸರಿ ಮೀರಿ ಬಳಕೆ ಹೀಗಾಗಿ 45,29,633 ಮಂದಿಯಿಂದ ಜುಲೈ ತಿಂಗಳ ಪೂರ್ಣ ಬಿಲ್ ಪಾವತಿ ಮಾಡಬೇಕಾಗುತ್ತದೆ.

 

Related