ಬೆಂಗಳೂರು ನಗರದಲ್ಲಿ ಆಸ್ತಿ ಮಾಲೀಕರಿಗೆ ಬಿಗ್ ಶಾಕ್ !

ಬೆಂಗಳೂರು ನಗರದಲ್ಲಿ ಆಸ್ತಿ ಮಾಲೀಕರಿಗೆ ಬಿಗ್ ಶಾಕ್ !

ಬೆಂಗಳೂರು: ಬಿಬಿಎಂಪಿಯು ಸುಮಾರು 10533 ಆಸ್ತಿಗಳಿಗೆ ಬೀಗ ಜಡಿದಿರುವ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರು ನಗರದಲ್ಲಿ ಆಸ್ತಿ ಮಾಲೀಕರು ತಮ್ಮ ಆಸ್ತಿ ಮಾಹಿತಿಯನ್ನು ತಪ್ಪಾಗಿ ನೀಡಿರುವವರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರಿಗೆ ಆದಾಯ ತೆರಿಗೆ ಕಟ್ಟಲು ಡೆಡ್ ಲೈನ್ ನೀಡಿದ್ದರೂ ಕೂಡ ಸಾರ್ವಜನಿಕರು ತೆರಿಗೆ ಕಟ್ಟುವುದರಲ್ಲಿ ವಿಳಂಬ ಮಾಡಿರುವುದು ಮತ್ತು ತೆರಿಗೆ ಮಾಹಿತಿಯನ್ನು ತಪ್ಪಾಗಿ ನೀಡಿರುವುದನ್ನು ಖಂಡಿಸಿ ಬಿಬಿಎಂಪಿ ಈಗ ನಗರದಲ್ಲಿರುವ ಸುಮಾರು 10533 ಆಸ್ತಿಗಳಿಗೆ ಬೀಗ ಜಡೆದಿದೆ.

ಬಿಬಿಎಂಪಿಯ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ವಸೂಲಿ ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಕಂದಾಯ ವಿಭಾಗ ಹೊಸಹೊಸ ಮಾರ್ಗ ಕಂಡುಕೊಳ್ಳುತ್ತಿದೆ. ಅದರಂತೆ ಆಸ್ತಿ ಮಾಲೀಕರ ಆಸ್ತಿಗಳನ್ನು ಪರಿಶೀಲನೆ ನಡೆಸಿ, ಎಸ್‌ಎಎಸ್‌ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರನ್ನು ಪತ್ತೆ ಮಾಡಿ ಅವರಿಂದ ಹೆಚ್ಚುವರಿ ಮೊತ್ತ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಅದರಲ್ಲೂ ವಸತಿ ಕಟ್ಟಡವಿದ್ದು, ಅದರಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದರೆ, ಅಂತಹ ಆಸ್ತಿ ಮಾಲೀಕರಿಗೆ ದುಬಾರಿ ದಂಡ ಮತ್ತು ಬಡ್ಡಿಯನ್ನು ವಿಧಿಸಲಾಗುತ್ತಿದೆ. ಅದರ ಜತೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೂ ನೋಟಿಸ್‌ ಜಾರಿ ಮಾಡಿ ಎಚ್ಚರಿಕೆ ನೀಡಲಾಗುತ್ತಿದೆ. ಬಿಬಿಎಂಪಿಯ ಈ ಏಕಾಏಕಿ ಕ್ರಮದಿಂದಾಗಿ ಆಸ್ತಿ ಮಾಲೀಕರು ಕಂಗಾಲಾಗಿದ್ದಾರೆ.

 

Related