ರೀಲ್ಸ್ ರಾಣಿಗೆ ಬಿಗ್ ರಿಲೀಫ್..!

ರೀಲ್ಸ್ ರಾಣಿಗೆ ಬಿಗ್ ರಿಲೀಫ್..!

ಬೆಂಗಳೂರು: ರಾಯಚೂರು ಮೂಲದ ಏಳು ವರ್ಷದ ಹೆಣ್ಣು ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸೋನು ಶ್ರೀನಿವಾಸ ಗೌಡ ಅವರು ಜೈಲು ಪಾಲಾಗಿದ್ದರು.

ಇದೀಗ ಸೋನು ಶ್ರೀನಿವಾಸ್ ಗೌಡ ಅವರಿಗೆ ಜಾಮೀನು ಸಿಕ್ಕಿದ್ದು ಅವರಿಂದ ಜೈಲಿನಿಂದ ಹೊರ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ರೂಲ್ಸ್ ಮಾಡುವ ಮೂಲಕ ಪ್ರಸಿದ್ಧಿಯನ್ನು ಹೊಂದಿದ ಸೋನು ಶ್ರೀನಿವಾಸ ಗೌಡ ಅಕ್ರಮವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಜೈಲು ಪಾಲಾಗಿದ್ದರು.

ಇದೀಗ ಸೋನುಗೌಡ ಅವರಿಗೆ ಏಪ್ರಿಲ್ 4 ಅಂದರೆ ನಿನ್ನೆ ಅವರಿಗೆ ಜಾಮೀನು ಸಿಕ್ಕಿದೆ. ಇಂದು ಮಧ್ಯಾಹ್ನ ಅವರು ಬಿಡುಗಡೆ ಆಗೋ ಸಾಧ್ಯತೆ ಇದೆ. ಪಿಡಿಜೆ ಕೋರ್ಟ್ ಸೋನು ಗೌಡಗೆ ಜಾಮೀನು ಮಂಜೂರು ಮಾಡಿದೆ​​. 1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಅವರಿಗೆ ಜಾಮೀನು ನೀಡಲು ಕೋರ್ಟ್ ಒಪ್ಪಿದೆ. ಈ ಷರತ್ತುಗಳನ್ನು ಪಾಲಿಸಿದ ಬಳಿಕ ಅವರು ಬಿಡುಗಡೆ ಆಗಲಿದ್ದಾರೆ ಎನ್ನಲಾಗಿದೆ.

 

Related