ಕೋಲಾರ ಪೊಲೀಸರ ಭರ್ಜರಿ ಬೇಟೆ

ಕೋಲಾರ ಪೊಲೀಸರ ಭರ್ಜರಿ ಬೇಟೆ

ಕೋಲಾರ: ಕೋಲಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಬೈಕ್ ಹಾಗೂ ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಕೋಲಾರದ ಕಾರಂಜಿಕಟ್ಟೆ ಬಡಾವಣೆಯ ಸಂಜಯ್ ಮತ್ತು ಸೈಯದ್ ಇಮ್ರಾನ್, ಕುಂಬಾರಪೇಟೆ ನಿವಾಸಿ ನಂದಿ ಬಂಧಿತ ಆರೋಪಿಗಳು.

ಬಂಧಿತರಿಂದ 30 ಲಕ್ಷ ರೂ, ಮೌಲ್ಯದ 30 ಬೈಕ್ ಮತ್ತು 3 ಲಕ್ಷ ರೂ. ಮೌಲ್ಯದ 50 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಆರೋಪಿಗಳು ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳ್ಳತನ ಮಾಡಿಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ(ಎಸ್ಪಿ) ನಾರಾಯಣ್ ಮಾಹಿತಿ ನೀಡಿದ್ದಾರೆ.

ಸಂಜಯ್ ಮತ್ತು ಸೈಯದ್ ಇಮ್ರಾನ್, ನಂದಿ ಸೇರಿ ಕಳ್ಳತನ ಮಾಡಿರುವ 3 ಲಕ್ಷ ರೂ. ಮೌಲ್ಯದ 50 ಮೊಬೈಲ್ ಫೋನ್ಗಳನ್ನು ಪೊಲೀಸರು ಜೋಡಿಸಿ ಇಟ್ಟಿರುವುದು. ಬಂಧಿತ ಮೂವರಿಂದ ವಶಕ್ಕೆ ಪಡೆದುಕೊಂಡ ಸುಮಾರು 30 ಲಕ್ಷ ರೂ, ಮೌಲ್ಯದ 30 ಬೈಕ್ಗಳನ್ನು ಪೊಲೀಸರು ಸಾಲಾಗಿ ನಿಲ್ಲ (ವರದಿಗಾರ: ಕೋಲಾರರೆಡ್ಡಿ)

Related