ಡಿವಿಎಸ್‌ ಗೆ ತೀವ್ರ ನಿರಾಸೆ

ಡಿವಿಎಸ್‌ ಗೆ ತೀವ್ರ ನಿರಾಸೆ

ನವದೆಹಲಿ: ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರಿಗೆ ಹೈಕಮಾಂಡ್ ಕಳೆದ ವಾರ ಬುಲಾವ್ ಮಾಡಿದ್ದರಿಂದ ಬುದುವಾರ ಸದಾನಂದ ಗೌಡ ಅವರು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದರು.

ಆದರೆ ದೆಹಲಿಗೆ ಆಗಮಿಸಿದ್ದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರಿಗೆ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ. 2 ದಿನಗಳ ಕಾಯುವಿಕೆ ಬಳಿಕ ಡಿವಿಎಸ್ ತೀವ್ರ ನಿರಾಸೆಯೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ.

ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆ ಉಲ್ಲೇಖಿಸಿ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಡಿವಿ ಸದಾನಂದಗೌಡ ಪತ್ರ ಬರೆದಿದ್ದರು. ಪತ್ರ ಓದಿದ್ದ ಜೆಪಿ ನಡ್ಡಾ ದೆಹಲಿಯಲ್ಲಿ ಬಂದು ಭೇಟಿ ಮಾಡಿ, ಚರ್ಚಿಸಲು ಸೂಚನೆ ನೀಡಿದ್ದರು.

ಜೆಪಿ ನಡ್ಡಾ ಸೂಚನೆ ಹಿನ್ನೆಲೆ ಬುಧವಾರ ದೆಹಲಿಗೆ ಬಂದಿದ್ದ ಡಿವಿಎಸ್, ಜೆಪಿ ನಡ್ಡಾ ಸೇರಿದಂತೆ ಬೇರೆ ಬೇರೆ ನಾಯಕರ ಭೇಟಿಗೆ ಪ್ರಯತ್ನಿಸಿದರು. ಆದರೆ ಪಂಚ ರಾಜ್ಯಗಳ ಚುನಾವಣೆ ಭರದಲ್ಲಿರುವ ವರಿಷ್ಠರು ಭೇಟಿಗೆ ಸಮಯ ನೀಡಿಲ್ಲ. ಜೆಪಿ ನಡ್ಡಾ ಅವರು 2 ದಿನಗಳ ಸಮಯ ನೀಡುವ ಭರವಸೆ ನೀಡಿ ಕಾಯಿಸಿದ್ದರು.

2 ದಿನಗಳ ಬಳಿಕ ಭೇಟಿಗೆ ಸಮಯ ನೀಡದ ಹಿನ್ನೆಲೆ ಇಂದು (ಶುಕ್ರವಾರ) ಸದಾನಂದಗೌಡ ಬೆಂಗಳೂರಿಗೆ ಮರಳಿದ್ದಾರೆ.

Related