ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಭಾವನಾ  

ಬೆಂಗಳೂರು: IVF ಮೂಲಕ ಗರ್ಭಿಣಿಯಾಗಿದ್ದ ನಟಿ ಭಾವನಾ ರಾಮಣ್ಣ ಅವರು 40ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗಿದ್ದರು. ಸದ್ಯ 8ನೇ ತಿಂಗಳಿನಲ್ಲಿರುವ ನಟಿಗೆ ಈಗಲೇ ಹೆರಿಗೆ ಮಾಡಿಸಲಾಗಿದೆ. ವೈದ್ಯರ ಸಲಹೆ 2 ವಾರಗಳ ಹಿಂದೆಯೇ ಹೆರಿಗೆ ಮಾಡಿಸಲಾಗಿದೆ. ಆದರೆ ದುರಾದೃಷ್ಟವಶತ್‌ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಹೆಣ್ಣು ಮಗು ಬದುಕುಳಿದಿದ್ದು, ತಾಯಿ ಹಾಗೂ ಶಿಶು ಕ್ಷೇಮವಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಭಾವನಾ ಸೀಮಂತ ಮಾಡಿಕೊಂಡಿದ್ದರು. ಆದರೆ 7ನೇ ತಿಂಗಳಿನಲ್ಲಿರುವಾಗ ನಟಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ವೈದ್ಯರು 8ನೇ ತಿಂಗಳಿಗೆ ಹೆರಿಗೆ ಮಾಡಿಸುವ ಸೂಚನೆ ನೀಡಿದ್ದರು. 2 ವಾರಗಳ ಹಿಂದೆ ಹೆರಿಗೆ ಮಾಡಿಸಲಾಗಿತ್ತು. ಆದರೆ ಒಂದು ಮಗು ಮೃತಪಟ್ಟಿದೆ. ಇದನ್ನೂ ಓದಿ: ಗಣಿಧಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು

ತಾಯಿ ಆಗುವ ಆಸೆ ಇತ್ತು, ಅದೀಗ ನೆರವೇರುತ್ತಿದೆ. ತುಂಬ ಸಮಯದಿಂದ ಮಹಿಳೆಯರು ಸಿಂಗಲ್‌ ಪೇರೆಂಟ್‌ ಆಗೋದನ್ನು ಕಾನೂನು ಬೆಂಬಲಿಸಿರಲಿಲ್ಲ. ಕಾನೂನು ಕೆಲಸ ಆದಬಳಿಕ ನಾನು ಈ ನಿರ್ಧಾರಕ್ಕೆ ಬಂದಿದ್ದರು.

 

Related