ವಾಹನ ಸಮಾರರೇ ಎಚ್ಚರ…!

ವಾಹನ ಸಮಾರರೇ ಎಚ್ಚರ…!

ಬೆಂಗಳೂರು: ವಾಹನಸವರೆ ಎಚ್ಚರ ಎಚ್ಚರ… ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ನಿಮ್ಮ ಮನೆಗೆ ಪೊಲೀಸ್ ಅಧಿಕಾರಿಗಳೇ ಬಂದು ದಂಡ ವಸುಲಿ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಹೌದು, ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೆ ಓಡಾಡುವುದು, ತ್ರಿಬಲ್ ರೈಡ್ ಇನ್ನಿತರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ವಾಹನಗಳ ಮೇಲೆ ಏನಾದರೂ ಸುಮಾರು 50,000 ದಂಡ ಇದ್ದರೆ ನಿಮ್ಮ ಮನೆಗೆ ಪೊಲೀಸ್ ಅಧಿಕಾರಿಗಳೇ ಬಂದು ಆ ದಂಡ ವಸುಲಿಯನ್ನು ಮಾಡುತ್ತಾರೆ ಎಂದು ತಿಳಿದುಬಂದಿದೆ.

ಯಸ್…ಇನ್ಮುಂದೆ ದಂಡ ವಸೂಲಿಗಾಗಿ ಬೆಂಗಳೂರು ನಗರ ಸಂಚಾರಿ ಪೊಲೀಸರೇ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ದಂಡದ ಮೊತ್ತ 50,000 ರೂ. ದಾಟಿದರೆ ಮನೆಗೆ ತೆರಳಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ ಪೊಲೀಸರು. ಕಳೆದ 10‌ ದಿನಗಳಿಂದ ನಗರದಲ್ಲಿ 2,681 ವಾಹನಗಳ ಮೇಲೆ 50,000 ರೂ.ಗೂ ಅಧಿಕ ದಂಡ ಇದೆ. ಈಗಾಗಲೇ ಅನೇಕ ವಾಹನ ಸವಾರರ ಮನೆಗೆ ತೆರಳಿ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಕೆಲ ವಾಹನಗಳ ಮಾಲೀಕರು ದಂಡ ಪಾವತಿಸದೆ ಬೇರೆಯವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.

ಇಂಥವರಿಗೆ ಕಾಲಾವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ ಇದ್ದರೆ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

Related