ರಾಜ್ಯದ ಜನತೆಗೆ ಮತ್ತೊಂದು ಶಾಕ್, ವಿದ್ಯುತ್ ದರ ಹೆಚ್ಚಳ..!

  • In State
  • June 28, 2022
  • 207 Views
ರಾಜ್ಯದ ಜನತೆಗೆ ಮತ್ತೊಂದು ಶಾಕ್, ವಿದ್ಯುತ್ ದರ ಹೆಚ್ಚಳ..!

ತರಕಾರಿ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹೈರಾಣಿಗಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಅದು ‘ಪವರ್’ಫುಲ್ ಶಾಕ್.ಈಗ ವಿದ್ಯುತ್ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಹೊಸ ದರಗಳು ಜುಲೈ 1 ರಿಂದ ಅನ್ವಯವಾಗಲಿದೆ. ಈ ಮೂಲಕ ಜನರ ಜೇಬಿಗೆ ವಿದ್ಯುತ್ ದರ ಮತ್ತಷ್ಟು ಹೊರೆ ಆಗಲಿದೆ.

ಜುಲೈ 1 ರಿಂದ ವಿದ್ಯುತ್ ದರ 19 ರೂ.ಗಳಿಂದ 31 ರೂ.ಗೆ ಏರಿಕೆಯಾಗಲಿದೆ. ಅಂದ್ರೆ ಪ್ರತಿ ತಿಂಗಳು 100 ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು 19 ರೂ.ಯಿಂದ 31 ರೂ. ಪಾವತಿಸಬೇಕು.


ಕಲ್ಲಿದ್ದಲು ದರ ಹೆಚ್ಚಳವಾದ ಹಿನ್ನೆಲೆ ಬೆಲೆ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಕಲ್ಲಿದ್ದಲು ಅಭಾವದ ಹಿನ್ನೆಲೆ ದರ ಸಹ ಏರಿಕೆಯಾಗುತ್ತಿದೆ.

ಇತ್ತ ಶಾಖೋತ್ಪನ್ನ ಕೇಂದ್ರಗಳಲ್ಲಿಯ ಉತ್ಪಾದನೆ ವೆಚ್ಚ ಸಹ ಏರಿಕೆ ಆಗುತ್ತಿರುವ ಹಿನ್ನೆಲೆ ದರ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

Related