ಗುಂಡಿ ನಿರ್ಮಾಣ ಬೇಲೂರು ಮಂಚೂಣಿ

ಗುಂಡಿ ನಿರ್ಮಾಣ ಬೇಲೂರು ಮಂಚೂಣಿ

ಬೇಲೂರು: ಕೇಂದ್ರ ಸರಕಾರದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಅಭಿಯಾನದಡಿ ಕೈಗೊಂಡಿರುವ ಸೋಕ್‌ಪಿಟ್ (ಇಂಗುಬಚ್ಚಲುಗುಂಡಿ) ನಿರ್ಮಾಣದಲ್ಲಿ ಹಳೇಬೀಡು ಗ್ರಾಮ ಪಂಚಾಯಿತಿ ಮುಂಚೂಣಿಯಲ್ಲಿದೆ.

ಸೋಕ್‌ಪಿಟ್ ನಿರ್ಮಾಣ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಜಿ.ಪಂ.ಮಾಹಿತಿ ಶಿಕ್ಷಣ ಸಂವಹನ ವಿಭಾಗದ ತಂಡದವರು ಪರಿಶೀಲಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದರೆ. ಕಾಮಗಾರಿ ಪರಿಶೀಲನೆ ನಂತರ ಮಾಹಿತಿ ನೀಡಿದ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ವಿ.ಎ.ಸಜ್ಜನ್, ಹಳೇಬೀಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಹಾಗೂ ಆಡಳಿತ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ತಾಲೂಕಿನಲ್ಲಿ ೧೮೦೦ ಸೋಕ್‌ಪಿಕ್ ಬಚ್ಚಲುಗುಂಡಿ ನಿರ್ಮಾಣ ಆಗಬೇಕಿದೆ. ಹಳೇಬೀಡು ಗ್ರಾ.ಪಂ. ೧ ವಾರದಲ್ಲಿ ೧೦೦ ಸೋಕ್‌ಪಿಕ್ ಗುಂಡಿಗಳ ನಿರ್ಮಿಸಿದೆ. ಬಸ್ತಿಹಳ್ಳಿ ೫೦, ಹಳೇಬೀಡು, ಮಲ್ಲಾಪುರ, ಚೀಲನಾಯಕನಹಳ್ಳಿ ಒಟ್ಟು ೫೦ ಗುಂಡಿಗಳ ನಿರ್ಮಿಸಲಾಗಿದೆ.

ಹಳೇಬೀಡಿನ ಬೆಣ್ಣೆಗುಡ್ಡ ನಿವಾಸಿಗಳು ತಮ್ಮ ಸ್ಥಳದಲ್ಲಿದ್ದ ಹೆಬ್ಬಂಡೆಗಳ ಒಡೆದು ಬಚ್ಚಲುಗುಂಡಿ ನಿರ್ಮಾಣ ಮಾಡಿಕೊಂಡಿದ್ದಾರೆ. ಬಚ್ಚಲುಗುಂಡಿ ನಿರ್ಮಾಣಕ್ಕೆ ೩೧೭ ಕುಟುಂಬದವರು ಅರ್ಜಿ ಸಲ್ಲಿಸಿದ್ದಾರೆ. ಜಾಬ್‌ಕಾರ್ಡ್ ಹೊಂದಿದವರು ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಗ್ರಾಮದಲ್ಲಿ ಕೊಳಚೆ ನೀರು ನಿಲ್ಲುವುದರಿಂದ ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಬಚ್ಚಲು ನೀರು ಚರಂಡಿಯಲ್ಲಿ ಸರಿಯಾಗಿ ಹರಿಯದೆ ಕೊಳೆತು ವಾಸನೆ ಬರುತ್ತದೆ. ಎಲ್ಲಿಬೇಕೊ ಅಲ್ಲಿ ನೀರು ಹರಿದು ಸೊಳ್ಳೆಗಳ ತಾಣವಾಗುತ್ತದೆ. ಇದನ್ನು ತಪ್ಪಿಸಲು ಈ ಇಂಗುಬಚ್ಚಲುಗುಂಡಿ ಸಹಕಾರಿಯಾಗಿದೆ. ಸರ್ಕಾರ ಸೋಕ್‌ಪಿಕ್ ಗುಂಡಿ ಒಂದಕ್ಕೆ ೧೪ ಸಾವಿರ ರೂ. ನೀಡುತ್ತಿದ್ದು ಕೆಲಸ ಹಾಗೂ ಸಾಮಾಗ್ರಿ ವೆಚ್ಚ ಇದರಲ್ಲಿ ಒಳಗೊಂಡಿರುತ್ತದೆ ಎಂದು ಹೇಳಿದರು.

 

 

 

 

 

Related