ಮತ್ತೆ ಪಡ್ಡೆ ಹುಡುಗರ ಕಣ್ಸಳೆಯಲು ಬಂದ ಕೆಂಡಸಂಪಿಗೆ ಬ್ಯೂಟಿ

ಮತ್ತೆ ಪಡ್ಡೆ ಹುಡುಗರ ಕಣ್ಸಳೆಯಲು ಬಂದ ಕೆಂಡಸಂಪಿಗೆ ಬ್ಯೂಟಿ

ಬೆಂಗಳೂರು: ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾನ್ವಿತಾ ಕಾಮತ್ ಮತ್ತೆ ಅಭಿಮಾನಿಗಳ ಮುಂದೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

ಹೌದು ನಟಿ ಪ್ರಿಯಾಂಕಾ ಉಪೇಂದ್ರ ನಟನೆಯ ಕ್ಯಾಪ್ಚರ್ ಚಿತ್ರದಲ್ಲಿ ಪ್ರಿಯಾಂಕಾ ಅವರ ಮಗಳಾಗಿ ಮಾನ್ವಿತಾ ಕಾಮತ್ ಅವರು ತೆರೆ ಹಂಚಿಕೊಂಡಿದ್ದಾರೆ.

ಲೋಹಿತ್ ನಿರ್ದೇಶನದ ‘ಕ್ಯಾಪ್ಚರ್’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಕ್ಯಾಪ್ಟರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ನಟಿಸಿದ್ದಾರೆ.

ಕ್ಯಾಪ್ಚರ್ ಈಗಾಗಲೇ ಗೊತ್ತಿರುವ ಹಾಗೆ ಇದೊಂದು ಹಾರರ್ ಸಿನಿಮಾ. ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿರುವುದು ವಿಶೇಷ. ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೀಗ ಮಾನ್ವಿತಾ ಕೂಡ ನಟಿಸುತ್ತಿದ್ದಾರೆ ಎನ್ನುವ ವಿಚಾರ ಕ್ಯಾಪ್ಚರ್ ಮೇಲಿನ ಕುತೂಹಲ ಹೆಚ್ಚಿಸಿದೆ.

 

Related