ಬಿಡಿಎ ಸಾಲು ಸಾಲು ಯಡವಟ್ಟು!

ಬಿಡಿಎ ಸಾಲು ಸಾಲು ಯಡವಟ್ಟು!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡುವುದು ಬಹು ಕಷ್ಟಕರದ ಸಂಗತಿ. ಹೌದು ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೈಟ್ ತೆಗೆದುಕೊಳ್ಳಲು ಹಾಗೂ ಮನೆ ಕಟ್ಟಲು ಕೈ ತುಂಬಾ ಹಣವಿರಬೇಕು.

ಆದರೆ ಬೆಂಗಳೂರಿನಲ್ಲಿ ಬಿಡಿಎ ಸೇಟುಗಳು ಒಂದಾನೊಂದು ಕಾಲದಲ್ಲಿ ಈ ಸೈಟ್ ಕೊಳ್ಳಲು ಜನರು ಮುಗಿ ಬೀಳುತ್ತಿದ್ದರು. ಆದರೆ ಈಗ ಸೈಟ್ ಕೊಂಡವರು ನಮಗೆ ಈ ಸೈಟ್ ಸಹವಾಸೆವೇ ಬೇಡ ಎಂದು ಬಿಡಿಎ ಪದಾಧಿಕಾರಿಗಳಿಗೆ ತಿಳಿಸುತ್ತಿದ್ದಾರೆ ಜನ ಬೆಂಗಳೂರುನಲ್ಲಿ ಮನೆ ಕಟ್ಟಲು ಸಾಲ ಸೋಲ ಮಾಡಿ ಬಿಡಿಎ ಸೈಟ್ ಖರೀದಿಸಿರುತ್ತಾರೆ. ಆದರಿಗ ಆ ಬಿಡಿಎ ಸೈಟ್ ಬೇಡ ನೀವೇ ಇಟ್ಟಿಕೊಳ್ಳಿ ಅಂತ ಪ್ರಾಧಿಕಾರಕ್ಕೆ ವಾಪಸ್ ಮಾಡುತ್ತಿದ್ದಾರೆ. ಇದರಿಂದ ಬಿಡಿಎ ಇಕ್ಕಟ್ಟಿನಲ್ಲಿ ಸಿಲುಕಿದೆ.

ಹೌದು, ಕೆಂಪೇಗೌಡ ಲೇಔಟ್‌ನಲ್ಲಿ ನಿವೇಶನ ಹಂಚಿಕೆಗೆ ಇನ್ನಿಲ್ಲದ ಉತ್ಸಾಹ ತೋರಿಸೋ ಬಿಡಿಎ, ಮೂಲಭೂತ ಸೌಕರ್ಯಗಳ ಕಡೆ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಬಿಡಿಎ ಸೈಟ್ ಸಿಕ್ರೆ ಸಾಕಪ್ಪ ಅಂತಿದ್ದವರು, ಇದೀಗ ಅದರ ಸಹವಾಸವೇ ಬೇಡಪ್ಪ ಅನ್ನೋಕೆ ಶುರುಮಾಡಿದ್ದಾರೆ.. ಬೆಂಗಳೂರಲ್ಲಿ ಹೇಗಾದರೂ ಮಾಡಿ ಒಂದು ಸೈಟ್ ನ್ನ ಗಿಟ್ಟಿಸಿಕೊಳ್ಳಬೇಕು ಅಂತಾ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಸುಮಾರು ಭಾರಿ ಜನ ಅರ್ಜಿಗಳನ್ನ ಹಾಕ್ತಾರೆ.. ಆದ್ರೆ ಸುಮಾರು ಐದಾರು ಸಲ ಅರ್ಜಿ ಹಾಕಿದ್ರು ಸೈಟ್ ಸಿಗೋದಿಲ್ಲ.. ಆದ್ರೆ ಕೆಲವರಿಗೆ ಅದೃಷ್ಟವೆಂಬಂತೆ ಸೈಟ್ ಸಿಗುತ್ತೆ.. ಸೈಟ್ ಸಿಕ್ತು ಅಂತಾ ಖುಷಿಯಲ್ಲಿದ್ದವರು, ಇದೀಗ ಸೈಟ್ ಸಹವಾಸವೇ ಬೇಡ ಅಂತಿದ್ದಾರೆ. ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಅಲರ್ಟ್ ಆದವರು ಇದೀಗ ಸೈಟ್ ಸಹವಾಸ ಬೇಡ ಎನ್ನುತ್ತಿದ್ದಾರೆ..

ಮೈಸೂರು ರಸ್ತೆ ಮಾರ್ಗದಲ್ಲಿ ಎರಡು ಹಂತದಲ್ಲಿ ಇಲ್ಲಿಯವರಿಗೆ 10 ಸಾವಿರ ಸೈಟ್ ಗಳನ್ನ ಕೆಲ ವರ್ಷ ಗಳ ಹಿಂದೆ  ಹಂಚಿಕೆ ಮಾಡಿದೆ 20 * 30 ಸೈಟ್ ಗೆ 10 ಲಕ್ಷ , 30*40 ಗೆ 23  ಲಕ್ಷ,  40*60 ಗೆ 52 ಲಕ್ಷ, 50*80 ಗೆ  96 ಲಕ್ಷ ದಂತೆ ಪ್ರಾಧಿಕಾರ  ಸೈಟ್ ಹಂಚಿಕೆ ಮಾಡಿದೆ. ಆದ್ರೆ ಲೇಔಟ್ ನಲ್ಲಿ ರಸ್ತೆ, ನೀರು, ವಿದ್ಯುತ್ ಸಂಪರ್ಕ, ಒಳಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳು ಇಲ್ಲ.  ಹೀಗಾಗಿ ಮನೆ ಕಟ್ಟಕ್ಕೆ ಆಗುತ್ತಿಲ್ಲ ನಿವೇಶದಾರರು ಬಿಡಿಎ ಹಿಡಿಶಾಪ ಹಾಕ್ತಿದ್ದಾರೆ..

 

Related