ಶಾಸಕ ಎನ್ ಎ ಹ್ಯಾರಿಸ್ ಗೆ ಬಿಡಿಎ ಅಧ್ಯಕ್ಷರ ಸ್ಥಾನ

ಶಾಸಕ ಎನ್ ಎ ಹ್ಯಾರಿಸ್ ಗೆ ಬಿಡಿಎ ಅಧ್ಯಕ್ಷರ ಸ್ಥಾನ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ ಎಂಟು ತಿಂಗಳ ತುಂಬುತ್ತಾ ಬಂದಿದ್ದು ಇಂದು ನಿಗಮ ಮಂಡಳಿಯ ಮೊದಲನೇ ಪಟ್ಟಿ ರಿಲೀಸ್ ಮಾಡಿದೆ.

ನಿಗಮ ಮಂಡಳಿಯ ಮೊದಲನೇ ಪಟ್ಟಿಯಲ್ಲಿ ಸುಮಾರು 36 ವಿವಿಧ ನಿಗಮ ಮಂಡಳಿಯ ಸ್ಥಾನಗಳು ಹೊರಬಿದ್ದಿದ್ದು ಅದರಲ್ಲಿ ಶಾಂತಿನಗರದ ಶಾಸಕ ಎನ್.ಎ ಹ್ಯಾರಿಸ್ ಅವರು ಬಿಡಿಎ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಹೌದು, ಇಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್ ನೇಮಕಗೊಂಡಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರ ಮೊದಲ ಪಟ್ಟಿಯಲ್ಲಿ ಹ್ಯಾರೀಸ್ ಆಯ್ಕೆ ಆದರು. ಒಟ್ಟು 36 ಶಾಸಕರಿಗೆ ವಿವಿಧ ನಿಗಮ-ಮಂಡಳಿಗಳಲ್ಲಿ ಸ್ಥಾನ ಸಿಕ್ಕಿದ್ದು ಬಿಡಿಎ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಬಿಡಿಎ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಶಾಸಕ ಜಮೀರ್ ಅಹ್ಮದ್ ಕೂಡ ಕಚೇರಿಗೆ ಆಗಮಿಸಿ ಶುಭ ಕೋರಿದರು.

 

Related