ಇಂದಿರಾ ಕ್ಯಾಂಟೀನ್ ನಾಗರೀಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ!

ಇಂದಿರಾ ಕ್ಯಾಂಟೀನ್ ನಾಗರೀಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ!

ಬೆಂಗಳೂರು: ಬೆಂಗಳೂರು ನಗರದಲ್ಲಿರುವಂತಹ ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಇನ್ನುಮುಂದೆ ಪ್ರತಿನಿತ್ಯ ಬಗೆ ಬಗೆಯ ತಿಂಡಿಗಳನ್ನು ನೀಡಲು ಬಿಬಿಎಂಪಿ ಮುಂದಾಗಿದ್ದು, ಬೆಳಗಿನ ಉಪಹಾರದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.

ಹೌದು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಆಟೋ ಚಾಲಕರಿಂದ ಹಿಡಿದು ಇನ್ನಿತರ ಜನರು ಇಂದಿರಾ ಕ್ಯಾಂಟೀನ್ ಉಪಹಾರವನ್ನು ಅವಲಂಬಿಸಿದ್ದಾರೆ. ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ನಗರದಲ್ಲಿರುವ ಸಾಮಾನ್ಯ ಜನರಿಗೆ ಇದು ಒಂದು ಭಾಗ್ಯವೇ ಸರಿ.

ಇನ್ನು ಇಂದಿರಾ ಕ್ಯಾಂಟೀನ್​ ನಲ್ಲಿ ನಿತ್ಯ ಒಂದೇ ಬಗೆಯ ತಿಂಡಿ, ಊಟ ಸೇವನೆ ಮಾಡುತ್ತಿದ್ದ ನಾಗರೀಕರಿಗೆ ಇದೀಗ ಬಿಬಿಎಂಪಿ ಬಗೆ ಬಗೆಯ ಉಪಹಾರಗಳನ್ನು ಮೆನು ಲಿಸ್ಟ್​ನಲ್ಲಿ ಸೇರಿಸಿದೆ. ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಬಿಬಿಎಂಪಿ ಟೆಂಡರ್ ಕರೆದಿದ್ದು. ಆಹಾರದ ಮೆನುವಿನಲ್ಲಿ ರಾಗಿ ಮುದ್ದೆ, ಇಡ್ಲಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್ ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ.

ಉಪಾಹಾರದಲ್ಲಿ ಇಡ್ಲಿ, ಪುಲಾವ್, ಬಿಸಿಬೇಳೆ ಬಾತ್, ಖಾರಾಬಾತ್, ಪೊಂಗಲ್, ಬ್ರೆಡ್ ಜಾಮ್, ಚೌಚೌಬಾತ್ ಒಂದೊಂದು ದಿನ ಲಭ್ಯವಾಗಲಿವೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ರಾಗಿಮುದ್ದೆ, ಚಪಾತಿ, ಅನ್ನ ಸಾಂಬಾರು ಇರಲಿವೆ. ಮಾವಿನಕಾಯಿ ಲಭ್ಯವಿರುವ ಕಾಲದಲ್ಲಿ ಯಾವುದಾದರೂ ಒಂದು ಉಪಾಹಾರದಲ್ಲಿ ಮಾವಿನಕಾಯಿ ಚಿತ್ರಾನ್ನವನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ಇಂದಿರಾ ಕ್ಯಾಂಟೀನ್ ಗ್ರಾಹಕರು ಪ್ರತಿನಿತ್ಯ ಬಗ್ಗೆ ಬಗೆಯ ತಿಂಡಿ ತಿನಿಸುಗಳನ್ನು ಸೇವಿಸುವ ಮೂಲಕ ಕಡಿಮೆ ದರದಲ್ಲಿ ಹೊಟ್ಟೆಯನ್ನು ತುಂಬಿಸಿಕೊಳ್ಳಬಹುದು.

Related