ಬಿಬಿಎಂಪಿ ಕಾರ್ಯಗಳ ಏಕರೂಪ ಪದ್ದತಿಗೆ ಚಾಲನೆ..

ಬಿಬಿಎಂಪಿ ಕಾರ್ಯಗಳ ಏಕರೂಪ ಪದ್ದತಿಗೆ ಚಾಲನೆ..

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯು ನಾಗರೀಕರಿಗೆ ಖಾತೆ ನೊಂದಾವಣೆ, ವಿಭಜನೆ, ಒಂದು ಗೂಡಿಸುವಿಕೆ, ವರ್ಗಾವಣೆ ಸೇರಿದಂತೆ ಇನ್ನಿತ್ಯಾದಿ ಹಲವಾರು ಸೇವೆಗಳನ್ನು ನೀಡುತ್ತಿದೆ. ಈ ಸಂಬಂಧ ಪಾಲಿಕೆಯ ಅಧಿಕಾರಿಗಳು / ನೌಕರರುಗಳು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳಲ್ಲಿ ಸರಳೀಕರಣ/ಸುಧಾರಣೆಗಳನ್ನೊಳಗೊಂಡಂತೆ, ಎಲ್ಲಾ ವಲಯಗಳಲ್ಲಿಯೂ ಏಕರೂಪ ಪದ್ಧತಿಯನ್ನು ಜಾರಿಗೆ ತರುವ ಉದ್ದೇಶದಿಂದ ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಕಂದಾಯ ಅಧಿಕಾರಿಗಳು, ಮೌಲ್ಯ ಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರಿಗೆ ಇಂದು ಪಾಲಿಕೆಯ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಏರ್ಪಡಿಸಿದ್ದ ಕಾರ್ಯಗಾರಕ್ಕೆ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ಚಾಲನೆ ನೀಡಿದರು.

ಬಿಬಿಎಂಪಿ ಕಂದಾಯ ಇಲಾಖೆಯು ನೀಡಲಾಗುತ್ತಿರುವ ಸೇವೆಗಳನ್ನು ಸರಳೀಕರಣಗೊಳಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ “ಇ-ಆಸ್ತಿ ತಂತ್ರಾಂಶ” ಜಾರಿಗೊಳಿಸಲಾಗಿರುತ್ತದೆ. ಅದರಂತೆ ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ 3 ವಾರ್ಡ್ ಗಳಲ್ಲಿ ಜಾರಿಗೊಳಿಸಿದ್ದ ಇ-ಆಸ್ತಿ ತಂತ್ರಾಂಶವನ್ನು, ಇದೀಗ ಪೂರ್ವ ವಲಯದಲ್ಲಿ ಬರುವ ವಾರ್ಡ್ ಗಳಲ್ಲಿ ಅನುಷ್ಟಾನಗೊಳಿಸಲಾಗಿರುತ್ತದೆ. ಆಸ್ತಿ ಮಾಲೀಕರು ಹತ್ತಿರದ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಹಾಯ ಕಂದಾಯ ಅಧಿಕಾರಿ ಕಛೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಆಸ್ತಿ ದಾಖಲೆಯನ್ನು ಪಡೆಯಬಹು. ಶೀಘ್ರದಲ್ಲಿಯೇ ಸಾರ್ವಜನಿಕರು ಖುದ್ದಾಗಿ ಆನ್ ಲೈನ್ ಮೂಲಕ ಸಿಟಿಜನ್ ಮಾಡ್ಯುಲ್ ಅಥವಾ ಗುರುತಿಸಲಾದ ಹತ್ತಿರದ ಬೆಂಗಳೂರು-01 ಕೇಂದ್ರಗಳಲ್ಲಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ಅದಾಗಿ ಇ-ಆಸ್ತಿ ತಂತ್ರಾಂಶ ವ್ಯವಸ್ಥೆಯನ್ನು ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿಯೂ ಅನುಷ್ಟಾನಗೊಳಿಸಲಾಗುವುದು.

Related