ಬಾಂಗ್ಲಾದೇಶ: ಗೆಲುವಿನ ನಗೆ ಬೀರಿದ ಶೇಖ್ ಹಸೀನಾ

ಬಾಂಗ್ಲಾದೇಶ: ಗೆಲುವಿನ ನಗೆ ಬೀರಿದ ಶೇಖ್ ಹಸೀನಾ

ಢಾಕಾ: ಸತತ ಐದನೆಯ ಬಾರಿ ಪ್ರಧಾನಿಯಾಗಿ ಆಯ್ಕೆಗೊಂಡಿರುವ ಶೇಖ್ ಹಸೀನಾ ಅವರು ಬಾಂಗ್ಲಾದೇಶಕ್ಕೆ ಮತ್ತೆ ಪ್ರಧಾನಿಯಾಗಿ ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ.

ಹೌದು, ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಅವರು ಬಹುಮತಗಳ ಅಂತರದಿಂದ ಗೆದ್ದು ಗೆಲುವಿನ ನಗೆಯನ್ನು ಬೀರಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾನುವಾರ ಐದನೇ ಅವಧಿಗೆ ಮರುಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

76 ವರ್ಷದ ಶೇಖ್ ಹಸೀನಾ 249,965 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ.

ಗೋಪಾಲಗಂಜ್ ಡೆಪ್ಯುಟಿ ಕಮಿಷನರ್ ಮತ್ತು ಚುನಾವಣಾ ಅಧಿಕಾರಿ ಖಾಜಿ ಮಹಬೂಬೂಲ್ ಆಲಂ ಈ ಫಲಿತಾಂಶವನ್ನು ಪ್ರಕಟಿಸಿದರು. ಶೇಖ್ ಹಸೀನಾ ಅವರು 1986 ರಿಂದ ಎಂಟು ಬಾರಿ ಗೋಪಾಲಗಂಜ್-3 ಸ್ಥಾನವನ್ನು ಗೆದ್ದಿದ್ದಾರೆ. ಪ್ರಧಾನಿ ಹಸೀನಾ ಅವರು ಸತತ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯಲಿದ್ದಾರೆ. ಮತದಾನ ಆರಂಭವಾದ ಬೆನ್ನಲ್ಲೇ ಪ್ರಧಾನಿ ಶೇಖ್ ಹಸೀನಾ ಅವರು ಢಾಕಾ ಸಿಟಿ ಕಾಲೇಜ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಈ ವೇಳೆ ಅವರ ಪುತ್ರಿ ಸೈಮಾ ವಾಜಿದ್ ಕೂಡ ಜೊತೆಗಿದ್ದರು.

 

Related