ಬಲ್ಬೀರ್ ಸಿಂಗ್ ವಿಧಿವಶ

ಬಲ್ಬೀರ್ ಸಿಂಗ್ ವಿಧಿವಶ

ನವದೆಹಲಿ: ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನ ಜಯಿಸಿ ಭಾರತದ ಹಾಕಿ ತಂಡದ ಸದಸ್ಯರಾಗಿದ್ದ ಬಲ್ಬೀರ್ ಸಿಂಗ್ ಇಂದು ವಿಧಿವಶರಾಗಿದ್ದಾರೆ.

ಬಲ್ಬೀರ್ ಸಿಂಗ್ ಸೀನಿಯರ್ (96) ಸೋಮವಾರ ವಿಧಿವಶರಾಗಿದ್ದು, ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಲ್ಬೀರ್ ಸಿಂಗ್ ಪಂಜಾಬ್ ಮೊಹಾಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಚಿಂತಾಜನಕ ಹಿನ್ನೆಲೆ ಬಲ್ಬೀರ್ ಗೆ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಆಧುನಿಕ ಒಲಿಂಪಿಕ್ ಇತಿಹಾಸದ 196 ದಂತಕತೆಗಳಲ್ಲಿ ಒಬ್ಬರು ಎಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಬಲ್ಬೀರ್ ಸಿಂಗ್ ಅವರನ್ನು ಆಯ್ಕೆ ಮಾಡಿತ್ತು. ಈ ಗೌರವ ಪಡೆದ ಏಕಮಾತ್ರ ಭಾರತೀಯ ಎಂಬ ಹೆಗ್ಗಳಿಕೆ ಕೂಡ ಅವರದ್ದಾಗಿದೆ. ಭಾರತ ತಂಡ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಾಗ ಬಲ್ಬೀರ್ ಅವರು ಆಟವಾಡಿದ್ದರು.

ಬಲ್ಬೀರ್ ಅವರು ಒಲಿಂಪಿಕ್ ಪುರುಷರ ಹಾಕಿ ಫೈನಲ್ ನಲ್ಲಿ ಗಳಿಸಿದ ವೈಯಕ್ತಿಕ ಗೋಲುಗಳು ದಾಖಲೆಯಾಗಿ ಉಳಿದಿದೆ. 1952ರ ಒಲಿಂಪಿಕ್ಸ್ ಹಾಕಿ ಫೈನಲ್ ನಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ ಭಾರತ 6-1 ಗೋಲುಗಳಿಂದ ಜಯಗಳಿಸಿತ್ತು.

Related