ಬಾಲಾಕೋಟ್ ವಾಯುದಾಳಿ ವರ್ಷಾಚರಣೆ

ಬಾಲಾಕೋಟ್ ವಾಯುದಾಳಿ ವರ್ಷಾಚರಣೆ

ನವದೆಹಲಿ, ಫೆ. 26 : ಪುಲ್ವಾಮಾದಲ್ಲಿ ಸಿಆರ್ಪಿಎಫ್ನ 40 ಯೋಧರನ್ನು ಹತ್ಯೆ ಮಾಡಿದ ಪಾಕಿಸ್ತಾನಿ ಬೆಂಬಲಿತ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ನಡೆಸಿದ ಯಶಸ್ವಿ ಬಾಲಾಕೋಟ್ ವೈಮಾನಿಕ ಆಕ್ರಮಣಕ್ಕೆ ಇಂದಿಗೆ ಒಂದು ವರ್ಷ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ಸೇರಿದಂತೆ ವಿವಿಧೆಡೆ ಜೈಷ್-ಎ- ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಅಡಗುತಾಣಗಳು ಮತ್ತು ತರಬೇತಿ ಶಿಬಿರಗಳ ಮೇಲೆ ಭಾರತೀಯ ಯುದ್ಧವಿಮಾನಗಳು ಇದೇ ದಿನ ಅಂದರೆ ಫೆ.26ರಂದು ಮಿಂಚಿನ ದಾಳಿ ನಡೆಸಿದವು. ಈ ಮಹತ್ವದ ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳ ಶಿಬಿರಗಳು, ಶಸ್ತ್ರಾಸ್ತ್ರ ದಾಸ್ತಾನು ಸಂಗ್ರಹಗಳು ನುಚ್ಚುನೂರಾಗಿ ಅನೇಕ ಭಯೋತ್ಪಾದಕರು ಹತರಾಗಿದ್ದರು.

Related