ನನ್ನ ಮೇಲೆ ಕೆಟ್ಟ ಆರೋಪಗಳನ್ನು ಮಾಡಲಾಗುತ್ತಿದೆ: ಕಂಗನಾ

ನನ್ನ ಮೇಲೆ ಕೆಟ್ಟ ಆರೋಪಗಳನ್ನು ಮಾಡಲಾಗುತ್ತಿದೆ: ಕಂಗನಾ

ದೆಹಲಿ: ಈ ಬಾರಿ ಲೋಕಸಭಾ ಚುನಾವಣೆ ಅಖಾಡಕ್ಕಿಳಿದಿರುವ ನಟಿ ಕಂಗನ ರಣಾವತ್ ಅವರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಇರುತ್ತಾರೆ.

ಕಳೆದ ಬಾರಿ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಹಿಮಾಚಲ ಪ್ರದೇಶದ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಗೆ ಇಳಿದಿರುವ ಕಂಗನ ಈಗ ಮತ್ತೆ ಸುದ್ದಿಯಾಗಿದ್ದಾರೆ.

ಹೌದು, ನಟಿ ಕಂಗನಾ ಅವರು ನಾನು ಮಾಂಸವನ್ನು ಸೇವಿಸುವುದಿಲ್ಲ ಅದರಲ್ಲಿ ಕೂಡ ಗೋ ಹತ್ಯೆ ಮಹಾ ಅಪರಾಧ ಆದ್ದರಿಂದ ನಾನು ಗೋಮಾಂಸವನ್ನು ಸೇವಿಸುವುದಿಲ್ಲವೆಂದು ಪೋಸ್ಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ನನ್ನ ವಿರುದ್ಧ ಸಂಪೂರ್ಣ ಆಧಾರರಹಿತ ವದಂತಿಗಳು ಮಾಡಲಾಗುತ್ತಿದೆ. ಅವುಗಳು ‘ನಾಚಿಕೆಗೇಡಿನ’ ವಿಚಾರ ಎಂದು ಹೇಳಿದ್ದಾರೆ. ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಪಾಲಿಸುತ್ತಿದ್ದೇನೆ ಹಾಗೂ ಪ್ರಚಾರ ಮಾಡುತ್ತಿದ್ದೇನೆ. ಆದರೆ ಇದೀಗ ನನ್ನ ಮೇಲೆ ಕೆಟ್ಟ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಆರೋಪಗಳಿಂದ ನನ್ನ ಇಮೇಜ್​​​ನ್ನು ಹಾಳು ಮಾಡುವುದಿಲ್ಲ ಎಂದು ಹೇಳಿದ್ದಾರೆ.

Related