ಸ್ವಾತಂತ್ರ್ಯ ಅಮೃತ ಮಹೋತ್ಸವ ಬಗ್ಗೆ ಜಾಗೃತಿ

ಸ್ವಾತಂತ್ರ್ಯ ಅಮೃತ ಮಹೋತ್ಸವ ಬಗ್ಗೆ ಜಾಗೃತಿ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಡಗರ, ಸಂಭ್ರಮ ಮನೆ ಮಾಡಿದೆ. ಎಲ್ಲ ಸರ್ಕಾರಿ, ಖಾಸಗಿ ಶಾಲೆ, ಕಾಲೇಜು, ತರಬೇತಿ ಕೇಂದ್ರ, ಸಂಘ, ಸಂಸ್ಥೆಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಿ ಸುಣ್ಣ, ಬಣ್ಣ, ತಳೀರು ತೋರಣಗಳಿಂದ ಕಳೆ ಹೆಚ್ಚಿಸಲಾಗಿದೆ.. ತಹಶೀಲ್ದಾರ ಬಸವರಾಜ ನಾಗರಾಳ, ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ ಪಟ್ಟಣದಾದ್ಯಂತ ಬಾವುಟ, ಬಣ್ಣ, ಬಣ್ಣದ ಪರಪರಿ ರಾರಾಜಿಸುವಂತೆ ಮಾಡಿದ್ದಾರೆ. ಚನ್ನಮ್ಮನ ಸಮಾಧಿ, ಶೂರ ಸಂಗೊಳ್ಳಿ ರಾಯಣ್ಣ, ಚನ್ನಮ್ಮನ ವೃತ್ತ, ಸಿದ್ಧೇಶ್ವರ, ಬಸವೇಶ್ವರ ಉದ್ಯಾನವನ, ಪ್ರಮುಖ ಸ್ಥಳಗಳಲ್ಲಿ ನುರಿತ ಚಿತ್ರಕಲಾ ಶಿಕ್ಷಕರುಗಳಿಂದ ಅಮೃತ ಮಹೋತ್ಸವದ ಕುರಿತು ಚಿತ್ರ ಬಿಡಿಸಿ ಜನರಲ್ಲಿ ಶನಿವಾರ ಜಾಗೃತಿ ಮೂಡಿಸಿದರು.
ತಹಶೀಲ್ದಾರ ಬಸವರಾಜ ನಾಗರಾಳ ಮಾತನಾಡಿ, ಮಕ್ಕಳಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮರ, ದೇಶಕ್ಕಾಗಿ ಕೊಡುಗೆ ನೀಡುವವರನ್ನಾಗಿ ರೂಪಿಸಬೇಕು’ ಎಂದರು. ಚಿತ್ರಕಲಾ ಶಿಕ್ಷಕರುಗಳಾದ ಎ.ಜಿ.ಚಿತ್ರಗಾರ, ಆರ್.ಬಿ.ಖಂಡಿ, ಜೆ.ಆರ್.ಪತ್ತಾರ, ಎಸ್.ಎಫ್.ನದಾಫ, ಎನ್.ಎಂ.ಅಂದಾನಶೆಟ್ಟಿ, ಎ.ಎಸ್.ಮುತ್ತವಾಡ, ಎಂ.ವಿ.ಭದ್ರಶೆಟ್ಟಿ, ರಾಜು ಬಡಿಗೇರ ಆಕರ್ಷಕವಾಗಿ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದರು. ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ನಿವೃತ್ತ ಯೋಧ ಈರಪ್ಪ ಕಾಡೇಶನವರ, ಮಂಜುನಾಥ ಜ್ಯೋತಿ, ಅಜಯ ಪಟ್ಟಣಶೆಟ್ಟಿ, ಕಂದಾಯ ನಿರೀಕ್ಷಕ ಸುರೇಶ ಮಾಳಗಿ, ಕಿರಿಯ ಆರೋಗ್ಯ ನೀರಿಕ್ಷಕ ಸುರೇಶ ಪಾಟೀಲ, ತಹಶೀಲ್ದಾರ ಕಚೇರಿ ಪ್ರಶಾಂತ ಕೆಲಗೇರಿಮಠ, ಪುರಸಭೆ ಸಿಬ್ಬಂದಿಗಳಾದ ಸಿದ್ಧು ತಟವಟಿ, ರಾಜು ನೇಸರಗಿ, ಅಶೋಕ ಹುಲ್ಲೆನ್ನವರ, ಸಂಜು ಬಡ್ಲಿ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

Related