ಕೊಪ್ಪಳ ತಹಸೀಲ್ದಾರ್ ಜೆ.ಬಿ.ಮಜ್ಗಿ ಕರೋನ ಜಾಗೃತಿ

ಕೊಪ್ಪಳ ತಹಸೀಲ್ದಾರ್ ಜೆ.ಬಿ.ಮಜ್ಗಿ ಕರೋನ ಜಾಗೃತಿ

ಕೊಪ್ಪಳ, ಏ. 05: ಕೊರೋನ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ತಹಸಿಲ್ದಾರ್ ಜೆ.ಬಿ.ಮಜ್ಗಿ ಜನತೆಗೆ ಸಲಹೆ ನೀಡಿದರು. ಡಿ.ಸಿ.ಕಛೇರಿ ಮುಂದೆ ವಿವಿಧ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೊರೋನ ವೈರಸ್ ತಡೆಗಟ್ಟಲು ಜಾಗೃತಿ ಅಭಿಯಾನ ಮಾಡಲಾಯಿತು. ಈಗಾಗಲೇ ಗ್ರಾಮಪಂಚಾಯತಿ ಮಟ್ಟದಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಲಾಗುತ್ತಿದೆ.

ಜನಗಳು ಹೊರಗೆ ಹೋಗದೆ ಮನೆಯಲ್ಲಿ ಇರುವದು ಒಳ್ಳೆಯದು, ಹಾಗೂ ಒಂದು ವೇಳೆ ಯಾವದೇ ಸಂದರ್ಭದಲ್ಲಿ ಹೊರಗಡೆ ಹೋಗಿದ್ದಲ್ಲಿ ಬಂದನಂತರ ಕಣ್ಣು,ಮೂಗು,ಬಾಯಿ ಮುಟ್ಟದೆ ಸ್ವಚ್ಛವಾಗಿ ಕೈ ಕಾಲು ತೊಳೆದುಕೊಂಡು ಮುಂಜಾಗ್ರತೆ ವಹಿಸುವದು ಅತೀ ಅವಶ್ಯಕ ಹಾಗೂ ಕೆಮ್ಮು,ನೆಗಡಿ, ಗಂಟಲು ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತ ಡಾ.ಗಿರೀಶ ಪಾಟೀಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ, ಮಸ್ತಿ ಹ್ಯಾಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಸಹಾಯಕ ನಿರ್ದೇಶಕ ಜಿ,ಸುರೇಶ, ರೆಡಕ್ರಾಸ್ ಸಂಸ್ಥೆಯ ಜಿಲ್ಲಾಕಾರ್ಯದರ್ಶಿ ಡಾ.ಶ್ರೀನಿವಾಸ್ ಮುಂತಾದವರು ಭಾಗಿಯಾಗಿದ್ದರು.

 

Related