‘ಕುರುಬ ಸಮಾಜದಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ’

‘ಕುರುಬ ಸಮಾಜದಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ’

ಶಹಾಪುರ: ಪ್ರಸ್ತುತ ದಿನಮಾನಗಳಲ್ಲಿ ಸಂಕುಚಿತ ಮನೋಭಾವದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಆದರೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ದೊಡ್ಡದು ಎಂದು ಪೂಜ್ಯ ಶ್ರೀ ರೇವಣಸಿದ್ದೇಶ್ವರ ಅಗತಿರ್ಥ ಮಹಾಸ್ವಾಮಿಗಳು ನುಡಿದರು. ನಗರದ ಭೀರಲಿಂಗೇಶ್ವರ ಬೆಟ್ಟದಲ್ಲಿ ಕರ್ನಾಟಕ ಕುರುಬ ಸಂಘ, ಕನಕ ನೌಕರರ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸುವಂತಹ ಕಾರ್ಯಕ್ರಮ ಮಾಡಿ ಉರುಪು-ಉತ್ಸಾಹ ತುಂಬುವಂತಹ ಕೆಲಸ ಸಮಾಜದ ವತಿಯಿಂದ ಮಾಡುತ್ತಿದ್ದು ನಿಜಕ್ಕೂ ಸಮಾಜಮುಖಿ ಕಾರ್ಯವಾಗಿದ್ದು ಇತರರಿಗೂ ಮಾದರಿಯಾಗಿದೆ ಎಂದು. ತಿಂಥಣಿಯ ಪೂಜ್ಯ ಶ್ರೀ ಭೀರಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದರು.

ಸಮಾಜದ ಹಿರಿಯರು ಮತ್ತು ಮಾಜಿ ಎಂಎಲ್‍ಸಿ ಅಮಾತೆಪ್ಪ ಕಂದಕೂರ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆ ಅಡಗಿದೆ. ಅದನ್ನು ಹೊರ ತರುವ ಪ್ರಯತ್ನ ಮತ್ತು ಪ್ರತಿಭೆ ಗುರುತಿಸಿಕೊಳ್ಳಲು ಸಮಾಜದ ವತಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದು ಶ್ಲಾಘನಿಯವಾದದ್ದು. ವಿದ್ಯಾರ್ಥಿಗಳ ನಡೆ-ನುಡಿ ಹಿರಿಯರ ವಾಣಿ ಆಲಿಸಬೇಕು. ಸಮಾಜವು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ. ಕ್ಷಣಿಕ ಹೊಗಳಿಕೆಗೆ ಗಮನ ಹರಿಸದೇ ಸಮಚಿತ್ತದಿಂದ ಸಾಗಬೇಕು ಎಂದರು.

ಮುಖಂಡರಾದ ಶರಣಪ್ಪ ಸಲಾದಪೂರ ಅವರು ಮಾತಾನಾಡಿ ಚಮತ್ಕಾರ ಮತ್ತು ಶಾರ್ಟ್‍ಕರ್ಟ್ ಮಾರ್ಗದಿಂದ ಅತ್ಯುನ್ನತ ಸ್ಥಾನ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ವಿದ್ಯಾರ್ಥಿಗಳು ಸತತ ಪ್ರಯತ್ನ ಹಾಗೂ ನಿರಂತರ ಪರಿಶ್ರಮ ಅಗತ್ಯವಿದೆ. ಇನ್ನೂ ಸಮಾಜದ ಅನೇಕರು ಉನ್ನತ ಮಟ್ಟದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ಟೀಕೆಗಳು ಸಾಮಾನ್ಯ ಅದನ್ನು ಹಿಮ್ಮೆಟ್ಟಿಸಿ ದೊಡ್ಡ ಸ್ಥಾನದಲ್ಲಿ ಗುರುತಿಸಿ ಕೊಳ್ಳುವಂತಹ ಕೆಲಸ ನಮ್ಮದಾಗಬೇಕು ಭರವಸೆ ಎಂಬ ಆಶಾಕಿರಣ, ಆತ್ಮವಿಶ್ವಾಸ ಆಯುಧದೊಂದಿಗೆ ಮುನ್ನಡೆಯಬೇಕು ತಿಳಿಸಿದರು.

ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್ ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಗದ ಉದ್ದಾರಕ್ಕಾಗಿ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದು ಗ್ರಾಮಗಳ ಅಭಿವೃಧ್ಧಿಗೆ ಶ್ರಮಿಸಬೇಕು. ಮತ್ತು ಸರ್ಕಾರದಿಂದ ದೊರೆಯುವ ಗ್ರಾಮಗಳ ಸೌಲಭ್ಯಗಳನ್ನು ಜನರಿಗೆ ಒದಗಿಸುವಂತಹ ಕಾರ್ಯ ಮಾಡಬೇಕು. ನೈತಿಕತೆ, ಮಾನಸಿಕ ಧೈರ್ಯ ತುಂಬಲು ಸಮಾಜದಿಂದ ಇಂತಹ ಕಾರ್ಯಕ್ರಮ ಪೂರಕ ಎಂದರು.

ಜಿಲ್ಲಾ ಸಮಾಜದ ಕಾರ್ಯಧ್ಯಕ್ಷ ಗಿರೆಪ್ಪಗೌಡ ಬಾಣತಿಹಾಳ ಮಾತನಾಡಿ ಪಕ್ಷಗಳ ಭೇದ ಮರೆತು ಸಮಾಜದ ಒಳಿತಿಗೆ ಎಲ್ಲರೂ ಕೈಜೋಡಿಸಬೇಕು. ಕೆಲವರಿಗೆ ಅಧಿಕಾರದ ವ್ಯಾಪ್ತಿ ತಿಳಿಯದೇ ಇದ್ದು ಅನುಭವ ಉಳ್ಳವರ ಸಹಕಾರದಿಂದ ಮುನ್ನಡೆಸಬೇಕಾಗಿದೆ. ಪ್ರತಿಯೊಬ್ಬರು ಒಂದು ಸಮಾಜದಲ್ಲಿ ಹುಟ್ಟುವುದು ಸಹಜ ಆದರೆ ಆ ಸಮಾಜದಲ್ಲಿ ಹುಟ್ಟಿದ ಮೇಲೆ ನಾವು ಕೂಡ ಗುರುತಿಸಿಕೊಳ್ಳಬೇಕು. ಎಲ್ಲಾರು ಒಗ್ಗಾಟ್ಟಾಗಿ ಸಮಾಜದ ಶ್ರೇಯಭಿವೃದ್ಧಿಗೆ ಒಂದುಗೂಡಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಭೀಮಣ್ಣ ಮೇಟಿ, ಬಸವರಾಜ ವಿಭೂತಿಹಳ್ಳಿ, ಶಿವಮಾಹಂತ ಚಂದಾಪೂರ, ಶಾಂತಗೌಡ ನಾಗನಟಗಿ, ಅಯ್ಯಪ್ಪ ಜಂಗಳಗಿ, ಮಲ್ಲಯ್ಯ ಪೂಜಾರಿ, ಮಾಳಪ್ಪ ಸುಂಕದ್, ಭಾರತಿ, ಅಯ್ಯಣ್ಣ ಇನಾಂದಾರ್, ರವಿ ರಾಜಾಪುರ, ಮರ್ಧಾನಿ ಸಲಾದಪುರ, ಮಹೇಶ ರಸ್ತಾಪುರ, ಅಶೋಕ ದಿನ್ನಿ, ಸಮಾಜದ ಗಣ್ಯರು, ಹಿರಿಯರು, ಯುವಕರು ಪಾಲ್ಗೊಂಡಿದ್ದರು. ಶರಬಣ್ಣ ರಸ್ತಾಪುರ, ಹೈಯಾಳಪ್ಪ ಸುರಪುರಕರ್, ಇದ್ದರು.

ಕೊಟ್:
‘ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ನೀಡಿದ ಗಣ್ಯರು’

ಕುರುಬ ಸಮಾಜದ ಪ್ರತಿಬಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿ ಸಮಾಜದ ಒಳಿತಿನ ಕುರಿತು ಮಾತನಾಡದೇ ಅನವಶ್ಯಕವಾಗಿ ಕೇವಲ ರಾಜಕೀಯದ ಕುರಿತು ಮಾತನಾಡುವುದು ಸಾಮಾನ್ಯವಾಗಿತ್ತು ಆದರೆ ಇದರಿಂದ ನೆರೆದಿದ್ದ ಕೆಲ ಜನ ನಿಮ್ಮ ರಾಜಕೀಯ ಚರ್ಚೆಗಾಗಿ ಮತ್ತೊಂದು ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂದರು.

Related