ಉದ್ಯಾನನಗರಿಯಲ್ಲಿ ಅವರೆ ಬೇಳೆ ಮೇಳ

ಉದ್ಯಾನನಗರಿಯಲ್ಲಿ ಅವರೆ ಬೇಳೆ ಮೇಳ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅವರೆ ಬೇಳೆ ಮೇಳ ನಡೆಯಲಿದ್ದು, ಅವರೆಕಾಳಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಮಾಡಿ ಮೇಳದಲ್ಲಿ ಇಡಲಾಗುತ್ತದೆ. ಇದನ್ನು ಸಿಲಿಕಾನ್ ಸಿಟಿ ಮಂದಿ ಸವಿಯಬಹುದು.

ಹೌದು, ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದೆ. ಆ ಮೂಲಕ ಉದ್ಯಾನನಗರಿ ಜನರು ವರ್ಷದ ಆರಂಭದಲ್ಲೇ ಅವರೆ ಬೇಳೆ ವಿವಿಧ ಭಕ್ಷ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ.

ಕಳೆದ ವರ್ಷದ ಅವರೆ ಬೇಳೆ ಮೇಳದಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದರಿಂದಾಗಿ ಸರತಿ ಸಾಲಿನಲ್ಲಿ ನಿಂತು ಕೂಡ ತಮಗೆ ಬೇಕಾದ ಆಹಾರವನ್ನು ಸೇವಿಸಲಿಲ್ಲ. 5 ಲಕ್ಷಕ್ಕೂ ಹೆಚ್ಚು ಜನರು ಸ್ಥಳದಲ್ಲಿ ನೆರೆದಿದ್ದರು. ಆದರೆ, ಈ ವರ್ಷ ಅಂತಹ ಪರಿಸ್ಥಿತಿ ಮರುಕಳಿಸದಂತೆ ಆಯೋಜಕರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

 

Related