ಆಸೀಸ್-ಕಿವೀಸ್ ಏಕದಿನ ಸರಣಿ ರದ್ದು

ಆಸೀಸ್-ಕಿವೀಸ್ ಏಕದಿನ ಸರಣಿ ರದ್ದು

ನವದೆಹಲಿ, ಮಾ. 15 : ಕೊರೊನಾ.. ಕೊರೊನಾ.. ಕೊರೊನಾ.. ಇಡೀ ಜಗತ್ತನ್ನೇ ಗಡ ಗಡ ನಡುಗಿಸುತ್ತಿರುವ ವೈರಸ್. ಈ ಕಿಲ್ಲರ್ ಕೊರೊನಾ ಹೊಡೆತಕ್ಕೆ ಜಂಟಲ್ಮ್ಯಾನ್ ಗೇಮ್ ತತ್ತರಿಸಿ ಹೋಗಿದೆ. ಕೊರೋನಾ ಎನ್ನೋ ಭೂತ ವಿಶ್ವ ಕ್ರಿಕೆಟ್ಗೆ ದೊಡ್ಡ ಹೊಡೆತವನ್ನೇ ನೀಡಿದೆ.
ವಿಶ್ವವನ್ನೇ ನಡುಗಿಸುತ್ತಿರುವ ಡೆಡ್ಲಿ ಕೊರೊನಾ ವೈರಸ್ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಪ್ರಮಾಣದಲ್ಲಿ ನಿರಾಸೆ ಮೂಡಿಸುತ್ತಿದೆ. ಈ ವರ್ಷ ಕ್ರಿಕೆಟ್ ಪ್ರಿಯರಿಗೆ ಬರಪುರ ಮನೋರಂಜನೆ ಸಿಗುತ್ತೆಂದು ಅಂದಾಜಿಸಲಾಗಿತ್ತು. ಆದರೆ, ಕಿಲ್ಲರ್ ಕೊರೊನಾ ವೈರಸ್ ಇದೆಲ್ಲ ತಲೆಕೆಳಗಾಗಿಸುತ್ತಿದೆ. ದಿನೇ ದಿನೇ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿರುವ ಕೊರೊನಾ. ಮನುಷ್ಯರನ್ನಷ್ಟೇ ಅಲ್ಲ ಕ್ರಿಕೆಟ್ ಎನ್ನೋ ಜಂಟಲ್ಮ್ಯಾನ್ ಗೇಮ್ ಅನ್ನು ಸಹ ಬಲಿಪಡೆಯುತ್ತಿದೆ.

Related