ಕಾಂಗ್ರೆಸ್​: ಸತೀಶ್​ ಸೈಲ್​ ಗೆಲುವು

ಕಾಂಗ್ರೆಸ್​: ಸತೀಶ್​ ಸೈಲ್​ ಗೆಲುವು

ಕಾರವಾರ: ಇಂದು ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ನ ಸತೀಶ್​ ಸೈಲ್​  ಹಾಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ರೂಪಾಲಿ ನಾಯ್ಕ್​ ಅವರನ್ನ ಸೋಲಿಸಿದ್ದಾರೆ. ಈ ಮೂಲಕ ಸತೀಶ್​ ಸೈಲ್​ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಳೆದ ಬಾರಿ 2018 ರ ವಿಧಾನಸಭೆ ಚುನಾವಣೆಯಲ್ಲಿ 45071 ಮತಗಳನ್ನ ಪಡೆದು, 15268 ಮತಗಳ ಅಂತರದಿಂದ ಸೋಲನ್ನ ಕಂಡಿದ್ದರು. ಈ ಬಾರಿ ಹೇಗಾದರೂ ಮಾಡಿ ಗೆಲುವು ಸಾಧಿಬೇಕೆಂದು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಅದೇ ರೀತಿ ಗೆಲುವಿನ ನಗೆ ಬೀರಿದ್ದಾರೆ.

 

Related