41 ವರ್ಷದ ಬಳಿಕ ಕನಸು ಕೊನೆಗೂ ನನಸು

41 ವರ್ಷದ ಬಳಿಕ ಕನಸು ಕೊನೆಗೂ ನನಸು

ಟೋಕಿಯೋ: ಭಾರತದ ಪುರುಷರ ಹಾಕಿ ತಂಡ 41 ವರ್ಷದ ಬಳಿಕ ಒಲಿಂಪಿಕ್ಸ್ ನ ಪದಕ ಗೆದ್ದುಕೊಂಡಿದ್ದು, ಜರ್ಮನಿ ತಂಡವನ್ನು 5-4  ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದು, ಭಾರತದ ಧ್ವಜವನ್ನು ಹಾರಿಸಿ ಆಟಗಾರರು ಸಂಭ್ರಮಾಚರಣೆ ಮಾಡಿದರು.

ಕಂಚಿನ ಪದಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್​ಪ್ರೀತ್ ಪಡೆ 5-4 ಗೋಲುಗಳ ಅಂತರದಲ್ಲಿ ಗೆಲುವುಕಂಡಿದೆ. ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ.

ಮೊದಲನೆ ಹಂತದಲ್ಲಿ ಭಾರತ 1-3 ಅಂತರದಲ್ಲಿ ಹಿನ್ನಡೆ ಕಂಡಿದ್ದರೆ, ಅಂತಿಮವಾಗಿ 5-4ರ ಅಂತರದಲ್ಲಿ ಜಯಗಳಿಸಿತ್ತು.

ಭಾರತದ  ಪ್ರಧಾನಿ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳು ಮತ್ತು ಆನಂದ್ ಮಹೀಂದ್ರಾ ಮತ್ತು ಕಿರಣ್ ಮಜುಂದಾರ್ ಶಾ,  ವಿಜಯದ ಬಗ್ಗೆ ತಮ್ಮ ಸಂತೋಷವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Related