ಕೊರೋನಾ ನಿಯಂತ್ರಣಕ್ಕೆ ಸಹಕರಿಸಿ

ಕೊರೋನಾ ನಿಯಂತ್ರಣಕ್ಕೆ ಸಹಕರಿಸಿ

ಕನಕಪುರ: ದೇಶವ್ಯಾಪಿ ನೀಡುತ್ತಿರುವ ಕೊರೋನಾ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಜನರು ಯಾವುದೇ ಆತಂಕ, ಅಂಜಿಕೆಯಿಲ್ಲದೆ ಲಸಿಕೆ ಪಡೆಯುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕೆಂದು ತಹಶೀಲ್ದಾರ್ ವಿ.ಆರ್.ವಿಶ್ವನಾಥ್ ಕರೆ ನೀಡಿದ್ದಾರೆ.
ನಗರದ ಐಪಿಪಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕಾ ಕೇಂದ್ರದಲ್ಲಿ ಕೊರೋನಾ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊರೋನಾ ಲಸಿಕೆಯ ಬಗ್ಗೆ ಹರಡುವ ಅನವಶ್ಯಕ ಅಪಪ್ರಚಾರಕ್ಕೆ ಯಾರೂ ಸಹ ಕಿವಿಗೊಡಬಾರದು. ಇದನ್ನು ವಿಜ್ಞಾನ, ತಂತ್ರಜ್ಞಾನದ ಮೂಲಕ ಪರೀಕ್ಷೆಗೊಳಪಡಿಸಿ ಎಲ್ಲ ವೈದ್ಯರೂ ಸಂಪೂರ್ಣ ಒಪ್ಪಿ ಶಿಫಾರಸ್ಸು ಮಾಡಿದ ನಂತರವೇ ಈ ಲಸಿಕೆಯನ್ನು ನಿರ್ಭಯವಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ನೀಡಲು ಮುಂದಾಗಿವೆ. ಈ ರೋಗ ನಿರೋಧಕ ಕೊರೋನಾ ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಡೆಯುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಮುಂದಾಗಬೇಕು. ಈ ಮೊದಲು ಕೊರೋನಾ ತೀವ್ರಗತಿಯಲ್ಲಿ ಹರಡಿದ್ದರಿಂದ ದೇಶವನ್ನು ಲಾಕ್‌ಡೌನ್ ಮಾಡಿದ ಪರಿಣಾಮ ದೇಶ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಇನ್ನು ಮುಂದಾದರೂ ಪ್ರತಿಯೊಬ್ಬ ಪ್ರಜೆ, ಸಂಘಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನರಿತು ಕೊರೋನಾವನ್ನು ದೇಶದಿಂದ ಹೊರಹಾಕಲು ಸಹಕರಿಸಬೇಕೆಂದು ಮನವಿ ಮಾಡಿದರು.

Related