ಪತಿ ಮೇಲೆ ಹಲ್ಲೆ ಪತ್ನಿ ಮೇಲೆ ಅತ್ಯಾಚಾರ!?

ಪತಿ ಮೇಲೆ ಹಲ್ಲೆ ಪತ್ನಿ ಮೇಲೆ ಅತ್ಯಾಚಾರ!?

ಕೊಪ್ಪಳ: ಗಂಗಾವತಿ ನಗರದಲ್ಲಿ ಒಂದು ನಾಚಿಕೆಗೇಡು ಸಂಗತಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳ ಮಧ್ಯೆ ಆಗಾಗ ಜಗಳ ಬರುತ್ತಿತ್ತಂತೆ ಆದಕಾರಣ ಪ್ರತಿ ಮುನಿಸಿಕೊಂಡು ಹೋಗಿದ್ದ. ಇನ್ನು ಪತಿಯನ್ನು ಹುಡುಕಿಕೊಂಡು ಹೋಗಿದ್ದ ಮಹಿಳೆಯನ್ನು ಕಾಮುಕರ ಗುಂಪೊಂದು ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಬಸ್ ನಿಲ್ದಾಣದಲ್ಲಿ ಗಂಡ ಹೆಂಡತಿ ಜಗಳ ಮಾಡುತ್ತಿರುವುದನ್ನು ಕಂಡ ಕಾಮಕರ ಗುಂಪೊಂದು ಪತಿಯ ಮೇಲೆ ಹಲ್ಲೆ ಮಾಡಿ ಸಂತ್ರಸ್ತೆ ಪತ್ನಿಯ ಮೇಲೆ ಆರು ಜನ ಅತ್ಯಾಚಾರ ವ್ಯಸಗಿದ್ದಾರೆ.

ಜಗಳವಾಡುತ್ತಿದ್ದ ಸಮಯವನ್ನ ಬಳಸಿಕೊಂಡ ದುಷ್ಕರ್ಮಿಗಳ ಗುಂಪು, ಪತಿಯ ಮೇಲೆ ಹಲ್ಲೆ ಮಾಡಿ, ಮಹಿಳೆಯನ್ನು ಪಕ್ಕದಲ್ಲಿದ್ದ ಪಾರ್ಕ್‌ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಗಂಗಾವತಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಗುಂಪಿನಲ್ಲಿದ್ದ ಓರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಇತತರು ಆತನಿಗೆ ಕೃತ್ಯಕ್ಕೆ ಸಾಥ್ ನೀಡಿದ್ದರಂತೆ.

ಲಿಂಗರಾಜ್ ಎನ್ನುವವನಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು, ಮೌಲಾಹುಸೇನ್, ಶಿವಕುಮಾರ್ ಸ್ವಾಮಿ, ಪ್ರಶಾಂತ್, ಮಹೇಶ, ಮಾದೇಶ ಎನ್ನುವವರು ಆರೋಪಿ ಸಾಥ್ ನೀಡಿದ್ದಾರಂತೆ. ಅತ್ಯಾಚಾರ ಎಸಗಿ ಲಿಂಗರಾಜ್ ಹಾಗೂ ಕಿರಾತಕರು ಸ್ಥಳದಿಂದ ಎಸ್ಕೇಪ್ ಆಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾಳೆ.

Related