ಮಚ್ಚೆ-ಹಲಗಾ ಹೆದ್ದಾರಿ ಕಾಮಗಾರಿ ವಿರೋಧಿ ರೈತರ ಪ್ರತಿಭಟನೆ

ಮಚ್ಚೆ-ಹಲಗಾ ಹೆದ್ದಾರಿ ಕಾಮಗಾರಿ ವಿರೋಧಿ ರೈತರ ಪ್ರತಿಭಟನೆ

ಬೆಳಗಾವಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಮೀನು ವಶಪಡಿಸಿಕೊಂಡು ಮಚ್ಚೆ-ಹಲಗಾ ಹೆದ್ದಾರಿ ನಿರ್ಮಿಸೋ ಸಂಬಂಧ, ಗುರುವಾರ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಈ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದು, ಪೊಲೀಸರಿಗೂ ಜಗ್ಗದೆ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದು, ಜೀವ ಕೊಟ್ಟೇವು, ಜಮೀನು ಬಿಡುವುದಿಲ್ಲ ಎಂಬುದಾಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿ. ಪ್ರತಿಭಟನಾ ನಿರತ ರೈತರನ್ನು ಪೊಲೀಸರು ತಡೆದಾಗ, ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದೆ. 15ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸುತ್ತಿದ್ದಂತೆ, ಮತ್ತಷ್ಟು ತಾರಕಕ್ಕೇರಿದೆ.

ಪ್ರತಿಭಟನಾ ನಿರತನಾಗಿದ್ದಂತ ಜಮೀನು ಮಾಲೀಕ ಆಕಾಶ್ ಎಂಬುವರು, ತಾನು ತಂದಿದ್ದAತ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಸ್ಥಳೀಯರು ರಕ್ಷಿಸಿ, ಬೆಂಕಿ ನಂದಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ತೀವ್ರ ಸ್ವರೂಪದಲ್ಲಿ ಪ್ರತಿಭಟನೆಯನ್ನು ಮಚ್ಚ-ಹಲಗಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರೋಧಿಸಿ, ಜಮೀನು ಮಾಲೀಕರು ನಡೆಸುತ್ತಿದ್ದಾರೆ.

Related