ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್‌ ಸುದ್ದಿ

ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್‌ ಸುದ್ದಿ

ಬೆಂಗಳೂರು: ರಾಜ್ಯದ ಜನರಿಗೆ ಈಗಾಗಲೇ ಬೆಲೆ ಏರಿಕೆಯ ಬಿಸಿ ತಟ್ಟಿದ್ದು ತರಕಾರಿ, ಹಾಲು ಇನ್ನಿತರ ವಸ್ತುಗಳ ಜೊತೆ ಆಗಸ್ಟ್ ಒಂದರಿಂದ ಹೊಟೇನಲ್ಲಿ ಸಿಗುವಂತಹ ತಿಂಡಿ, ಟೀ, ಕಾಫಿ ಗೂ ಸಹ ಬೆಲೆ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ.

ಹೌದು, ಮೊದಲೇ ಬೆಲೆ ಏರಿಕೆ ಬಿಸಿಯಲ್ಲಿರೋ ಜನತೆಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್. ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಹೋಟೆಲ್ ತಿಂಡಿ ತಿನಿಸು ದರವೂ ಹೆಚ್ಚಳವಾಗಲಿದೆ. ಈ ಬಗ್ಗೆ ಹೋಟೆಲ್ ಮಾಲಿಕರ ಸಂಘ ಇಂದು ಮಹತ್ವದ ಸಭೆ ನಡೆಸಿ ದರ ಏರಿಕೆಯ ಬಗ್ಗೆ ನಿರ್ಣಯ ಕೈಗೊಂಡಿದೆ.

ಹೋಟೆಲ್ ಅಸೋಸಿಯೇಷನ್ ನ ಸಭೆಯಲ್ಲಿ 10% ದರ ಹೆಚ್ಚಳದ ಬಗ್ಗೆ ತಿರ್ಮಾನ ಕೈ ಕೊಂಡಿದ್ದು, ಪರಿಷ್ಕೃತ ದರವು ಅಗಸ್ಟ್ 1ರಿಂದ‌ ಜಾರಿಯಾಗಲಿದೆ. ಈಗಾಗಲೇ ದರ ಹೆಚ್ಚಳಮಾಡಿರುವ ಹೋಟೆಲ್ ಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಮಾಹಿತಿ ನೀಡಿದ್ದಾರೆ.

Related